ಕುಶಾಲನಗರ, ಸೆ. 5: ಎಸ್‍ಎನ್‍ಡಿಪಿ ಕುಶಾಲನಗರ ಶಾಖೆಯಲ್ಲಿ ಶ್ರೀ ನಾರಾಯಣ ಗುರುಗಳ ಜಯಂತಿಯನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು. ಶಾಖೆಯ ಅಧ್ಯಕ್ಷ ಕೆ.ಟಿ. ಗಣೇಶ್ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ನಾರಾಯಣ ಗುರುಗಳ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ನಮಿಸಲಾಯಿತು.

ಈ ಸಂದರ್ಭ ಶಾಖೆಯ ಉಪಾಧ್ಯಕ್ಷ ಬಾಲಕೃಷ್ಣ, ಕಾರ್ಯದರ್ಶಿ ರಾಜೇಶ್, ಯೂನಿಯನ್ ಸದಸ್ಯ ಟಿ.ಎಸ್. ಉದಯ್ ಮತ್ತು ನಿರ್ದೇಶಕರು ಇದ್ದರು.