ಮಡಿಕೇರಿ, ಸೆ. 4: ವೀರಾಜಪೇಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ಸಹಾಯಕ ಪ್ರಾಧ್ಯಾಪಕರಾಗಿದ್ದ ಬಸವರಾಜ್ ಕೆ. ಅವರು ಮಂಗಳೂರು ವಿಶ್ವವಿದ್ಯಾನಿಲಯದ ಎಸ್.ವಿ.ಪಿ. ಕನ್ನಡ ಅಧ್ಯಯನ ಸಂಸ್ಥೆಯ ಪ್ರಾಧ್ಯಾಪಕ ಪೆÇ್ರ. ಸೋಮಣ್ಣ ಹೊಂಗಳ್ಳಿ ಮಾರ್ಗದರ್ಶನದಲ್ಲಿ ಮಂಡಿಸಿದ ‘ಮಹಾಕಾವ್ಯ ಪರಂಪರೆಯಲ್ಲಿ ಸುಜನಾ ಅವರ ಯುಗಸಂಧ್ಯಾ ಮಹಾಕಾವ್ಯ’ ಎಂಬ ಮಹಾಪ್ರಬಂಧಕ್ಕೆ ಮಂಗಳೂರು ವಿಶ್ವವಿದ್ಯಾನಿಲಯ ಪಿ.ಎಚ್.ಡಿ ಪದವಿಯನ್ನು ನೀಡಿದೆ. ಇವರು 2020ರ ಸೆಪ್ಟೆಂಬರ್ 1 ರಿಂದ ಹನಗೂಡು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.