ಪೆÇನ್ನಂಪೇಟೆ, ಸೆ. 4: ಗೋಣಿಕೊಪ್ಪಲಿನ ಸಮಾಜ ಸೇವಕರ ತಂಡವೊಂದು ಓಣಂ ಹಬ್ಬದ ಅಂಗವಾಗಿ ಅಗತ್ಯ ದಿನಸಿ ವಸ್ತುಗಳನ್ನೊಳಗೊಂಡ ಓಣಂ ಕಿಟ್‍ಗಳನ್ನು ವಿತರಿಸಿತು.
ಕೆ.ಎಂ. ಅಬ್ದುಲ್ ರಹಿಮಾನ್ (ಬಾಪು), ಅಬ್ದುಲ್ ಸಮದ್, ತನ್ವೀರ್ ಅಹ್ಮದ್, ಪಾಪ್ಯುಲರ್ ರಫೀಕ್ ಮತ್ತು ವಕೀಲ ಎಂ.ಎ. ಸಮೀರ್ ಅವರುಗಳು ಓಣಂ ನಿಮಿತ್ತ ಗೋಣಿಕೊಪ್ಪಲಿನ ಬಡ ಮಲೆಯಾಳಿ ಬಾಂಧವರಿಗೆ ಓಣಂ ಕಿಟ್‍ಗಳನ್ನು ವಿತರಿಸಿದರು. 25ಕ್ಕೂ ಹೆಚ್ಚು ಓಣಂ ಕಿಟ್‍ಗಳನ್ನು ಈ ತಂಡ ವಿತರಿಸಿತು.