ಗೋಣಿಕೊಪ್ಪ ವರದಿ, ಸೆ. 4 : ಬೆಂಗಳೂರು ಪೂರ್ವ ವಿಭಾಗದ ಎಸಿಪಿ ಆಗಿ ಕೊಡಗಿನ ಯವಕ ಪಾಡಿ ಗ್ರಾಮದ ಅಂಜಪರವಂಡ ಕವಿತಾ ಕಾರ್ಯಪ್ಪ ಅಧಿಕಾರ ಸ್ವೀಕರಿಸಿದ್ದಾರೆ.
ಮುಂಡಂಡ ಚಿಣ್ಣಪ್ಪ, ಕುಂಞಮ್ಮ ದಂಪತಿ ಪುತ್ರಿಯಾಗಿರುವ ಕವಿತಾ ಕಾರ್ಯಪ್ಪ ಹಾಕಿ ಆಟಗಾರ ಅಂಜಪರವಮಡ ಶರಣ್ ಕಾರ್ಯಪ್ಪ ಅವರ ಪತ್ನಿ. ಕೊಡಗು ಜಿಲ್ಲೆಯಲ್ಲಿ ಕಾನೂನು ಶಿಕ್ಷಣ ಆರಂಭಿಸುವುದು ಸೂಕ್ತ ಎಂಬದು ಕವಿತಾ ಅಭಿಪ್ರಾಯವಾಗಿದ್ದು, ಪೊಲೀಸ್ ವೃತ್ತಿ ಅಥವಾ ಸರ್ಕಾರಿ ವೃತ್ತಿ ಸೇರಬಯಸುವವರಿಗೆ ಸಲಹೆ ನೀಡಲು ತಾನು ಸಿದ್ಧ ಎಂದು ಅವರು ತಿಳಿಸಿದ್ದಾರೆ.