ಮಡಿಕೇರಿ, ಸೆ. 4: ಶ್ರೀ ದಂಡಿನ ಮಾರಿಯಮ್ಮ ದಶಮಂಟಪ ಸಮಿತಿ ವತಿಯಿಂದ ದಸರಾ ಆಚರಣೆಯ ಪೂರ್ವ ಸಿದ್ಧತೆಗಳ ಬಗ್ಗೆ ಚರ್ಚೆ ನಡೆಸಲು ಮತ್ತು ಸಮಿತಿಯ ಅಧಿಕಾರ ಹಸ್ತಾಂತರ ಮಾಡಲು ತಾ. 5 ರಂದು (ಇಂದು) ಪೂರ್ವಭಾವಿ ಸಭೆ ನಡೆಸಲಾಗುವುದು ಎಂದು ಸಮಿತಿಯ ಪ್ರಧಾನ ಕಾರ್ಯದರ್ಶಿ ಎಂ.ಎಲ್. ಸತೀಶ್ ತಿಳಿಸಿದ್ದಾರೆ.
ನಗರದ ಕಾವೇರಿ ಕಲಾಕ್ಷೇತ್ರದಲ್ಲಿ ಸಂಜೆ 4 ಗಂಟೆಗೆ ಸಭೆ ನಡೆಯಲಿದ್ದು, ಈ ಬಾರಿಯ ನೂತನ ದಶಮಂಟಪ ಸಮಿತಿಯಾದ ಶ್ರೀ ಚೌಡೇಶ್ವರಿ ದೇವಾಲಯ ದಸರಾ ಸಮಿತಿಗೆ ಅಧಿಕಾರ ಹಸ್ತಾಂತರ ಮಾಡಲಾಗುವುದು.
ಕೋವಿಡ್ ಮಾರ್ಗಸೂಚಿ ಹಿನ್ನೆಲೆ ಪ್ರತಿ ದೇವಾಲಯದಿಂದ ಹಾಗೂ ಕರಗ ಸಮಿತಿಯಿಂದ ಇಬ್ಬರು ಸದಸ್ಯರು ಮಾತ್ರ ಸಭೆಯಲ್ಲಿ ಪಾಲ್ಗೊಳ್ಳಲು ಅವಕಾಶವಿದೆ. ಹಾಜರಾಗುವವರು ಕಡ್ಡಾಯವಾಗಿ ಮಾಸ್ಕ್ ಧರಿಸಿ ಬರಬೇಕೆಂದು ಸತೀಶ್ ಮನವಿ ಮಾಡಿದ್ದಾರೆ.