ಮಡಿಕೇರಿ, ಸೆ. 4: ಜಿಲ್ಲೆಯಲ್ಲಿ ಹೊಸದಾಗಿ 46 ಕೊರೊನಾ ಪ್ರಕರಣಗಳು ವರದಿಯಾಗಿವೆ. ಇದುವರೆಗೆ 1650 ಪ್ರಕರಣಗಳು ವರದಿಯಾಗಿದ್ದು, 1283 ಮಂದಿ ಗುಣಮುಖರಾಗಿದ್ದಾರೆ. ಒಟ್ಟು 346 ಪ್ರಕರಣಗಳು ಸಕ್ರಿಯವಾಗಿವೆ. 21 ಮಂದಿ ಮೃತಪಟ್ಟಿದ್ದಾರೆ.

ಕೋವಿಡ್ ಆಸ್ಪತ್ರೆಯಲಿ 78 ಮಂದಿ, ಕೋವಿಡ್ ಕೇರ್ ಸೆಂಟರ್‍ನಲ್ಲಿ 66 ಮಂದಿ, ಹೋಮ್ ಐಸೋಲೇಶನ್‍ನಲ್ಲಿ 202 ಮಂದಿ ದಾಖಲಾಗಿದ್ದಾರೆ. ಜಿಲ್ಲೆಯಾದ್ಯಂತ 247 ನಿಯಂತ್ರಿತ ವಲಯಗಳಿವೆ.

ಹೊಸ ಪ್ರಕರಣಗಳ ವಿವರ

ಮಡಿಕೇರಿ ತಾಳತ್ತಮನೆಯ 28 ವರ್ಷದ ಪುರುಷ ಮತ್ತು 19 ವರ್ಷದ ಮಹಿಳೆ, ದಕ್ಷಿಣ ಕನ್ನಡದ ಕಲ್ಲುಗುಂಡಿಯ 60 ವರ್ಷದ ಮಹಿಳೆ, ವೀರಾಜಪೇಟೆ ಕುಂದ ಅಂಚೆಯ ಈಚೂರಿನ 62 ವರ್ಷದ ಮಹಿಳೆ, ಮಡಿಕೇರಿ ಮೈತ್ರಿ ಹಾಲ್ ಬಳಿಯ ಪೆÇಲೀಸ್ ವಸತಿಗೃಹದ 36 ವರ್ಷದ ಮಹಿಳೆ ಮತ್ತು 7 ವರ್ಷದ ಬಾಲಕಿ, ಪಾಲಿಬೆಟ್ಟದ ಮಸೀದಿ ಮುಖ್ಯ ರಸ್ತೆ ಬಳಿಯ 75 ವರ್ಷದ ಪುರುಷ, ವೀರಾಜಪೇಟೆ ಅರ್ಜಿ ಅಂಚೆಯ 24 ವರ್ಷದ ಮಹಿಳೆ, ವೀರಾಜಪೇಟೆ ಗಾಂಧಿನಗರ ಬಿ.ಎಸ್.ಎನ್.ಎಲ್. ಕಚೇರಿ ಬಳಿಯ 34 ವರ್ಷದ ಪುರುಷ, ಮಡಿಕೇರಿ ಮೈತ್ರಿ ಹಾಲ್ ಬಳಿಯ ಪೆÇಲೀಸ್ ವಸತಿಗೃಹದ 31 ವರ್ಷದ ಪುರುಷ, ಹಾಸನದ ಅರಕಲಗೂಡಿನ 40 ವರ್ಷದ ಪುರುಷ, ಮಡಿಕೇರಿ ಪೆನ್‍ಷನ್ ಲೇಔಟಿನ 59 ವರ್ಷದ ಪುರುಷ, ಕುಶಾಲನಗರ ಬೈಚನಹಳ್ಳಿಯ 49 ವರ್ಷದ ಪುರುಷ, ಸಿದ್ದಾಪುರ ಪೆÇಲೀಸ್ ವಸತಿಗೃಹದ 47 ವರ್ಷದ ಪುರುಷ, ಹಾಸನದ ಅರಕಲಗೂಡುವಿನ 33 ವರ್ಷದ ಪುರುಷ, ವೀರಾಜಪೇಟೆ ಅರಪಟ್ಟು ಗ್ರಾಮ ಮತ್ತು ಅಂಚೆಯ 60 ವರ್ಷದ ಪುರುಷ, ಕುಶಾಲನಗರ ಬಸವೇಶ್ವರ ಲೇಔಟಿನ 67 ವರ್ಷದ ಮಹಿಳೆ, ವೀರಾಜಪೇಟೆ ಮಾಯಮುಡಿಯ ಎಲ್ಲೋ ಬ್ಯಾಂಬು ರೆಸಾರ್ಟ್ ಎದುರಿನ 70 ವರ್ಷದ ಮಹಿಳೆ, ಕುಶಾಲನಗರ ಮಾದಾಪಟ್ಟಣದ ಅರಬ್ಬಿ ಶಾಲೆ ಬಳಿಯ 61 ವರ್ಷದ ಪುರುಷ, ಕುಶಾಲನಗರದ ಆದಿ ಶಂಕರಾಚಾರ್ಯ ಲೇಔಟಿನ 40 ವರ್ಷದ ಮಹಿಳೆ, ಸೋಮವಾರಪೇಟೆ ತ್ಯಾಗತ್ತೂರಿನ ಭಗವತಿ ದೇವಾಲಯ ಬಳಿಯ 49, 45 ವರ್ಷದ ಪುರುಷರು ಮತ್ತು 20 ವರ್ಷದ ಮಹಿಳೆ, ಕುಶಾಲನಗರ ಶಿರಂಗಾಲದ ನಲ್ಲೂರುಕೊಪ್ಪಲಿನ 26 ವರ್ಷದ ಮಹಿಳೆ, ಕುಶಾಲನಗರ ಹೆಬ್ಬಾಲೆಯ ಬಸವೇಶ್ವರ ದೇವಾಲಯ ಬಳಿಯ 46 ವರ್ಷದ ಮಹಿಳೆ, ಕೊಡ್ಲಿಪೇಟೆ ಹೊನ್ನೆಕೋಡಿಯ 45 ಮತ್ತು 24 ವರ್ಷದ ಮಹಿಳೆಯರು, ವೀರಾಜಪೇಟೆ ಮಾಲ್ದಾರೆ ಗ್ರಾಮದ 53 ಮತ್ತು 47 ವರ್ಷದ ಪುರುಷರು, ಸಿದ್ದಾಪುರದ ಮಡಿಕೇರಿ ರಸ್ತೆಯ 19 ವರ್ಷದ ಪುರುಷ, ಕುಟ್ಟದ ಆಸ್ಪತ್ರೆ ವಸತಿಗೃಹದ 48 ವರ್ಷದ ಮಹಿಳೆ, ವೀರಾಜಪೇಟೆ ಕುಟ್ಟದ ಪೆÇಲೀಸ್ ವಸತಿಗೃಹದ 56 ವರ್ಷದ ಪುರುಷ, ಗೋಣಿಕೊಪ್ಪದ ಅರವತ್ತೊಕ್ಲುವಿನ 47 ವರ್ಷದ ಪುರುಷ, ಗೋಣಿಕೊಪ್ಪದ ಕಾರ್ ನಿಲ್ದಾಣದ ಹಿಂಭಾಗದ 38 ವರ್ಷದ ಮಹಿಳೆ, ವೀರಾಜಪೇಟೆ ಬೆಳ್ಳೂರು ಗ್ರಾಮದ ನೂರೆರದಾಳುವಿನ 71 ವರ್ಷದ ಪುರುಷ, ಶ್ರೀಮಂಗಲದ 26 ವರ್ಷದ ಮಹಿಳೆ, ವೀರಾಜಪೇಟೆ ವಿಜಯನಗರ 1ನೇ ಹಂತದ 62 ವರ್ಷದ ಮಹಿಳೆ, ವೀರಾಜಪೇಟೆ ಮೊಗರ್ ಗಲ್ಲಿಯ 5 ವರ್ಷದ ಬಾಲಕಿ ಮತ್ತು 45 ವರ್ಷದ ಮಹಿಳೆ, ಶ್ರೀಮಂಗಲ ಗ್ರಾಮದ ಶ್ರೀ ಕೃಷ್ಣ ದೇವಾಲಯ ಬಳಿಯ 77 ವರ್ಷದ ಮಹಿಳೆ, ಭಾಗಮಂಡಲ ಕೆವಿಜಿ ಕಾಲೇಜು ಬಳಿಯ 27 ವರ್ಷದ ಪುರುಷ, ಚೆಟ್ಟಳ್ಳಿ ಕಂಡಕೆರೆಯ 20 ವರ್ಷದ ಮಹಿಳೆ, ಪಿರಿಯಾಪಟ್ಟಣ ಬೈಲುಕುಪ್ಪೆಯ 37 ವರ್ಷದ ಪುರುಷ, ಸಿದ್ದಾಪುರ ಜಿಎಂಪಿ ಶಾಲೆ ಬಳಿಯ 60 ವರ್ಷದ ಪುರುಷ, ವೀರಾಜಪೇಟೆ ಕುಟ್ಟದ ಆಸ್ಪತ್ರೆ ವಸತಿಗೃಹದ 24 ವರ್ಷದ ಮಹಿಳೆ, ಮಡಿಕೇರಿ ಮೈತ್ರಿ ಹಾಲ್ ಬಳಿಯ ಪೆÇಲೀಸ್ ವಸತಿಗೃಹದ 26 ವರ್ಷದ ಪುರುಷನಿಗೆ ಸೋಂಕು ದೃಢಪಟ್ಟಿದೆ.