ಮಡಿಕೇರಿ, ಸೆ. 4: ಹಾಕತ್ತೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಸಿ.ಇ.ಓ. ಆಗಿ 15 ವರ್ಷ ಸೇವೆ ಸಲ್ಲಿಸಿ ನಿವೃತ್ತರಾದ ಬಿ.ಎಂ. ಸಂಜೀವ್‍ಕುಮಾರ್ ಅವರಿಗೆ ಮತ್ತು ಸಂಘದಲ್ಲಿ ಸತತ 37 ವರ್ಷ ಸೇವೆ ಸಲ್ಲಿಸಿ ಸಿ.ಇ.ಓ. ಆಗಿ ನಿವೃತ್ತರಾಗಿರುವ ಕೆ.ಪಿ. ಸೀತಮ್ಮ ಅವರಿಗೆ, 11 ವರ್ಷ ಜವಾನರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿರುವ ಕೆ.ಯಂ. ಮಹಮ್ಮದ್ ಅವರಿಗೆ ಸಂಘದ ಸಭಾಂಗಣದಲ್ಲಿ ಸನ್ಮಾನಿಸಿ, ಬೀಳ್ಕೊಡಲಾಯಿತು.

ಸಂಘದ ಪ್ರಭಾರ ಸಿ.ಇ.ಓ. ಡಿ.ಎಂ. ತೀರ್ಥಕುಮಾರ್ ಸ್ವಾಗತಿಸಿದರು. ಅಧ್ಯಕ್ಷ ಎಂ.ಪಿ. ತಿಮ್ಮಯ್ಯ, ಉಪಾಧ್ಯಕ್ಷ ಹೆಚ್.ಎಸ್. ಇಂದ್ರಕುಮಾರ್, ನಿರ್ದೇಶಕರಾದ ಟಿ.ಎಂ. ಅಯ್ಯಪ್ಪ, ಪಿ.ಎ. ಕಾವೇರಪ್ಪ ಸನ್ಮಾನಿತರ ಸೇವೆಯ ಬಗ್ಗೆ ಮಾತನಾಡಿದರು. ನಿರ್ದೇಶಕರಾದ ಟಿ.ಆರ್. ತಿಮ್ಮಯ್ಯ, ಎ.ಸಿ. ಅಪ್ಪಣ್ಣ, ಕೆ.ಸಿ. ಪ್ರಮೀಳ, ಬಿ.ಡಿ. ಗಂಗಮ್ಮ, ಟಿ.ಆರ್. ಹರಿಣಿ, ಎಂ.ಆರ್. ಧರಣೇಶ್, ಹೆಚ್.ಆರ್. ವಾಸಪ್ಪ ಸೇರಿದಂತೆ ಸಂಘದ ಸಿಬ್ಬಂದಿ ಹಾಜರಿದ್ದರು.