ಸೋಮವಾರಪೇಟೆ, ಸೆ. 4: ಸೋಮವಾರಪೇಟೆ ಪಟ್ಟಣ ಸೇರಿದಂತೆ ಸುತ್ತಮುತ್ತಲ ಗ್ರಾಮಗಳಿಗೆ ಕಳೆದ 33 ವರ್ಷಗಳಿಂದ ಪತ್ರಿಕಾ ವಿತರಕರಾಗಿ ಸೇವೆ ಸಲ್ಲಿಸುತ್ತಿರುವ ಬಾಣಾವರ ರಸ್ತೆ ನಿವಾಸಿ ಬಿ.ಪಿ. ಶಿವಕುಮಾರ್ ಅವರನ್ನು, ಪತ್ರಿಕಾ ವಿತರಕರ ದಿನದ ಅಂಗವಾಗಿ, ಪತ್ರಕರ್ತರ ಪರವಾಗಿ ಅಭಿನಂದಿಸಿ, ಸ್ಮರಣಿಕೆ ನೀಡಲಾಯಿತು.
ಸೋಮವಾರಪೇಟೆಯ ಪತ್ರಿಕಾ ಭವನ ಟ್ರಸ್ಟ್ ಅಧ್ಯಕ್ಷ ಎಸ್.ಮಹೇಶ್, ನಗರ ಪತ್ರಕರ್ತರ ಸಂಘದ ಅಧ್ಯಕ್ಷ ಡಿ.ಪಿ. ಲೋಕೇಶ್, ತಾಲೂಕು ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ವಿಜಯ್ ಹಾನಗಲ್, ಪ್ರಮುಖರಾದ ಮೃತ್ಯುಂಜಯ ಅವರುಗಳು, ಬಿ.ಪಿ. ಶಿವಕುಮಾರ್ ಅವರಿಗೆ ಸ್ಮರಣಿಕೆ ನೀಡಿ, ಅಭಿನಂದಿಸಿದರು.