ಕೂಡಿಗೆ, ಸೆ. 4: ತೊರೆನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಣಜೂರು ಗ್ರಾಮದ ಬಳಿ ಗಾಂಜಾ ಮಾರಾಟ ಮಾಡಲು ಸಂಚು ಹಾಕುತ್ತಿದ್ದ ತೊರೆನೂರು ಗ್ರಾಮದ ಲಕ್ಷ್ಮಪ್ಪ ಎಂಬಾತನ ಬಳಿ ಇದ್ದ ಎರಡು ಕೆ.ಜಿ. ಗಾಂಜಾವನ್ನು ಪೆÇಲೀಸರು ವಶಪಡಿಸಿಕೊಂಡು ಲಕ್ಷ್ಮಪ್ಪನನ್ನು ಬಂಧಿಸಿದ್ದಾರೆ.

ಎಸ್ಪಿ ಕ್ಷಮಾಮಿಶ್ರಾ ಅವರ ಮಾರ್ಗದರ್ಶನದಲ್ಲಿ ಡಿವೈಎಸ್‍ಪಿ ಶೈಲೇಂದ್ರ ಅವರ ಸೂಚನೆಯಂತೆ ಕುಶಾಲನಗರ ವೃತ್ತ ನಿರೀಕ್ಷಕ ಮಹೇಶ್, ಕುಶಾಲನಗರ ಗ್ರಾಮಾಂತರ ಪೆÇಲೀಸ್ ಠಾಣಾಧಿಕಾರಿ ನಂದೀಶ್ ಕುಮಾರ್ ಸಲಹೆಯಂತೆ ವ್ಯಕ್ತಿಯನ್ನು ಬಂಧಿಸಲಾಗಿದೆ. ಕಾರ್ಯಾಚರಣೆ ಸಂದರ್ಭ ವಿಶೇಷ ಪತ್ತೆ ದಳದ ತಂಡದವರಾದ ದಯಾನಂದ, ಸಜಿ, ಸಂಪತ್, ಪ್ರಕಾಶ್, ಸನತ್, ಚಾಲಕ ಗಣೇಶ ಹಾಜರಿದ್ದರು.