ಗೋಣಿಕೊಪ್ಪವರದಿ, ಸೆ. 4: ಬೆಳೆ ಪರಿಹಾರ ವಿಚಾರದಲ್ಲಿ ಜಿಲ್ಲೆಯ ಎಲ್ಲಾ ಗ್ರಾಮಗಳನ್ನು ಸೇರಿಸುವಂತೆ ಜಿಲ್ಲಾಧಿಕಾರಿ ಮಾಡಿರುವ ವರದಿಗೆ ಸರ್ಕಾರ ಮನ್ನಣೆ ನೀಡಬೇಕು ಎಂದು ಸಾಮೂಹಿಕ ನಾಯಕತ್ವದ ರೈತ ಸಂಘ, ಹಸಿರು ಸೇನೆ ಜಿಲ್ಲಾಧ್ಯಕ್ಷ ಚಿಮ್ಮಂಗಡ ಗಣೇಶ್ ಒತ್ತಾಯಿಸಿದ್ದಾರೆ.
ಮಳೆ, ಗಾಳಿ, ಕೊಳೆರೋಗದಿಂದ ಭತ್ತ ಕೃಷಿ, ಕಾಫಿ, ಕಾಳುಮೆಣಸು ನಷ್ಟವಾಗಿದೆ. ಇದನ್ನು ಪರಿಗಣಿಸಿ ಎಲ್ಲಾ ರೈತರಿಗೂ ಒಂದೇ ರೀತಿಯ ಪರಿಹಾರ ಕ್ರಮಕೈಗೊಳ್ಳಬೇಕು. ಈ ಬಗ್ಗೆ ಜಿಲ್ಲಾಧಿಕಾರಿ ಸರ್ಕಾರಕ್ಕೆ ನೀಡಿರುವ ವರದಿಯನ್ನು ಗಂಭೀರವಾಗಿ ಪರಿಗಣಿಸಿ ಎಲ್ಲಾ ರೈತರಿಗೂ ಪರಿಹಾರ ನೀಡಬೇಕು. ತಪ್ಪಿದಲ್ಲಿ ಪ್ರತಿಭಟನೆ ಮೂಲಕ ಸರ್ಕಾರವನ್ನು ಎಚ್ಚರಿಸಲಾಗುವುದು ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಗೋಷ್ಠಿಯಲ್ಲಿ ಖಜಾಂಚಿ ಬಾದುಮಂಡ ಮಹೇಶ್, ಸ್ಥಾಪಕ ಸದಸ್ಯ ಮಚ್ಚಮಾಡ ರಂಜಿ ಇದ್ದರು.