ಗೋಣಿಕೊಪ್ಪಲು/ಶನಿವಾರಸಂತೆ, ಸೆ. 2: ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶ ವ್ಯಾಪ್ತಿಯಲ್ಲಿ ಹುಲಿ ಮತ್ತು ಜಿಂಕೆ ಬೇಟೆಗೆ ಸಂಬಂಧಿಸಿದಂತೆ ಶನಿವಾರಸಂತೆ ಬಳಿಯ ಕಾವೇರಿ ರಸ್ತೆಯ ಕಾಫಿ ತೋಟದೊಳಗೆ ಅಡಗಿದ್ದ ಆರೋಪಿಗಳಾದ ಬಾಳೆಲೆಯ ಕಾಂಡೇರ ಶಶಿ ಎಂಬಾತನನ್ನು ಬುಧವಾರ ಮುಂಜಾನೆ ವೇಳೆ ಕಲ್ಲಳ್ಳ ವನ್ಯಜೀವಿ ವಲಯ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿಗಳಾದ ಶಶಿ ಹಾಗೂ ಉತ್ತಪ್ಪ ಎಂಬವರುಗಳು ಶನಿವಾರಸಂತೆಯ ಲಾಡ್ಜ್‍ವೊಂದರಲ್ಲಿ ತಂಗಿದ್ದಾರೆ ಎಂಬ ಖಚಿತ ಮಾಹಿತಿಯ ಮೇರೆ ಲಾಡ್ಜ್‍ಗೆ ತೆರಳಿ ಅಲ್ಲಿಯ ವ್ಯವಸ್ಥಾಪಕರನ್ನು ಪ್ರಶ್ನಿಸುವ ಸಂದರ್ಭ ರೂಮಿನಲ್ಲಿದ್ದ ಆರೋಪಿಗಳು ಭಯ ಗೊಂಡು ಲಾಡ್ಜ್‍ನ ಹಿಂಭಾಗ ದಿಂದ ನೆಗೆದು ಕತ್ತಲೆಯಲ್ಲಿ ಸಮೀಪದ ತೋಟ ವೊಂದರಲ್ಲಿ ಅಡಗಿದ್ದಾರೆ. ಅರಣ್ಯ ಇಲಾಖೆ ಸಿಬ್ಬಂದಿ ತೋಟ ವನ್ನು ಜಾಲಾಡಿ ಮರದ ಅಡಿಯಲ್ಲಿ ಅವಿತ್ತಿದ್ದ ಶಶಿಯನ್ನು ಬಂಧಿಸಿದ್ದು, ಉತ್ತಪ್ಪ ಪರಾರಿ ಯಾಗಿದ್ದಾನೆ.(ಮೊದಲ ಪುಟದಿಂದ) ಆರೋಪಿಯನ್ನು ಶನಿವಾರ ಸಂತೆಯ ಅರಣ್ಯ ವಲಯ ಅಧಿಕಾರಿಗಳ ಕಚೇರಿಗೆ ಕರೆದೊಯ್ದು ನಂತರ ಹೆಚ್ಚಿನ ತನಿಖೆಗಾಗಿ ಘಟನೆ ನಡೆದ ಸ್ಥಳಕ್ಕೆ ಕರೆದೊಯ್ದಿದ್ದಾರೆ. ಕಾರ್ಯಾಚರಣೆಯಲ್ಲಿ ಶನಿವಾರಸಂತೆ ಅರಣ್ಯಾಧಿಕಾರಿ ಪ್ರಪುಲ್‍ಶೆಟ್ಟಿ, ನಾಗರಹೊಳೆ ಹುಲಿ ಸಂರಕ್ಷಣಾಧಿಕಾರಿ ಪ್ರಮೋದ್, ಅರಣ್ಯ ಅಧಿಕಾರಿ ಹೆಚ್.ಕೆ. ಅಮಿತ್, ಉಪವಲಯ ಅರಣ್ಯಾಧಿಕಾರಿ ಶಿವಕುಮಾರ್, ಗೋವಿಂದರಾಜ್, ಸತೀಶ್, ಯೋಗೇಶ್ವರಿ, ಸಿಬ್ಬಂದಿಗಳಾದ ಲೋಹಿತ್, ಜಯಕುಮಾರ್, ಹರೀಶ್‍ಕುಮಾರ್, ಭರತ್, ದೇವಿಕಾಂತ್, ಕಾರ್ತಿಕ, ಶಿವಪ್ಪ, ನಾಗೇಶ್ ಪಾಲ್ಗೊಂಡಿದ್ದರು.