ಸೋಮವಾರಪೇಟೆ, ಸೆ. 2: ಸ್ನಾನಗೃಹದಲ್ಲಿ ಆಯತಪ್ಪಿ ಕೆಳಬಿದ್ದು, ಆಟೋ ಚಾಲಕ ರೋರ್ವರು ಮೃತಪಟ್ಟಿರುವ ಘಟನೆ ಪಟ್ಟಣ ಸಮೀಪದ ನಗರೂರು ಗ್ರಾಮದಲ್ಲಿ ನಡೆದಿದೆ.

ನಗರೂರು ನಿವಾಸಿ, ಪಟ್ಟಣದಲ್ಲಿ ಆಟೋ ಚಾಲಿಸುತ್ತಿದ್ದ ಸಂದೇಶ್ (42) ಎಂಬವರೇ ಮೃತರು. ಇಂದು ನಸುಕಿನ ಎರಡೂವರೆ ಗಂಟೆ ಸುಮಾರಿಗೆ ಮೂತ್ರ ವಿಸರ್ಜನೆಗೆಂದು ಸ್ನಾನಗೃಹಕ್ಕೆ ತೆರಳಿದವರು ಆಯತಪ್ಪಿ ಕೆಳಬಿದ್ದಿದ್ದಾರೆ.

ಪರಿಣಾಮ ಬೆನ್ನಿನ ಮೂಳೆ ಹಾಗೂ ಕುತ್ತಿಗೆಯ ನರ ತುಂಡಾಗಿದ್ದು, ಗಂಭೀರ ಸ್ಥಿತಿಗೆ ತಲುಪಿ ದ್ದಾರೆ. ತಕ್ಷಣ ಗಾಯಾಳು ವನ್ನು ಸೋಮವಾರಪೇಟೆ ಸರ್ಕಾರಿ ಆಸ್ಪತ್ರೆಗೆ ಕರೆತಂದು ಪ್ರಾಥಮಿಕ ಚಿಕಿತ್ಸೆ ಕೊಡಿಸಿದ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಕೆ.ಆರ್. ಆಸ್ಪತ್ರೆಗೆ ಸಾಗಿಸಲಾಗಿದೆ.

ಅಲ್ಲಿಯೂ ಸೂಕ್ತ ಚಿಕಿತ್ಸೆ ಲಭಿಸದ ಹಿನ್ನೆಲೆ ಜೆಎಸ್‍ಎಸ್ ಆಸ್ಪತ್ರೆಗೆ ರವಾನಿಸಿದ್ದು, ಕೊರೊನಾ ಪರೀಕ್ಷೆ ನಡೆಸಿ, ಒಳರೋಗಿಯಾಗಿ ವಾರ್ಡ್‍ಗೆ ಸಾಗಿಸಬೇಕೆನ್ನುವಷ್ಟರಲ್ಲಿ ಇಹಲೋಕ ತ್ಯಜಿಸಿದ್ದಾರೆ. ಮೃತರು ಪತ್ನಿ ಗೀತಾ ಸೇರಿದಂತೆ ಓರ್ವ ಪುತ್ರನನ್ನು ಅಗಲಿದ್ದಾರೆ.