ಮಡಿಕೇರಿ, ಸೆ. 2: ಕೊಡಗು ಜಿಲ್ಲೆಯ ಕಿರಿಯ ಪ್ರಾಥಮಿಕ, ಹಿರಿಯ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ವಿಭಾಗ ಸೇರಿದಂತೆ ಒಟ್ಟು 9 ಮಂದಿಗೆ ಪ್ರಸಕ್ತ ಸಾಲಿನ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪ್ರಕಟವಾಗಿದೆ.

ಈ ಪೈಕಿ ಕಿರಿಯ ಪ್ರಾಥಮಿಕ ಶಾಲಾ ವಿಭಾಗದಿಂದ ಅಮೆಚೂರು ಸರಕಾರಿ ಶಾಲೆಯ ಶಿಕ್ಷಕಿ ಕೆ.ಎಂ. ಲಲಿತ, ಯಡೂರು ಸರಕಾರಿ ಶಾಲೆಯ ಎಲ್.ಎಂ. ಪ್ರೇಮಾ, ಕೈಕೇರಿ ಶಾಲೆಯ ಎ.ಎ. ಜಯಂತಿ ಇವರುಗಳು ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಹಿರಿಯ ಪ್ರಾಥಮಿಕ ಶಾಲಾ ವಿಭಾಗದಿಂದ ಮಡಿಕೇರಿ ತಾಲೂಕಿನ ಕೆ.ಪಿ. ಬಾಣೆ ಸರಕಾರಿ ಶಾಲೆಯ ಕೆ.ಸಿ. ಧರ್ಮೇಂದ್ರ, ಸೋಮವಾರಪೇಟೆ ಬಳಗುಂದ ಶಾಲೆಯ ಕೆ.ಎನ್. ರಮೇಶ್ ಹಾಗೂ ವೀರಾಜಪೇಟೆ ತಾಲೂಕು ಮಾಯಮುಡಿಯ ಎಂ.ಟಿ. ಸತ್ಯ ಈ ಸಾಲಿನ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಪ್ರೌಢಶಾಲಾ ವಿಭಾಗದಿಂದ ಕೂಡಿಗೆ ಕ್ರೀಡಾ ಶಾಲೆಯ ಮುಖ್ಯ ಶಿಕ್ಷಕಿ ಪಿ.ಕೆ. ಕುಂತಿ ಕುಮಾರಿ, ಪಾರಾಣೆ ಪ್ರೌಢಶಾಲೆಯ ಎ.ಜಿ. ರಜನಿ ಹಾಗೂ ಮಾಯಮುಡಿ ಪ್ರೌಢಶಾಲೆಯ ಎಂ.ಯು. ಚಂಗಪ್ಪ ಭಾಜನರಾಗಿದ್ದು, ತಾ. 5 ರಂದು ಮಡಿಕೇರಿಯ ಸಂತ ಮೈಕಲರ ಶಾಲೆಯಲ್ಲಿ ಜರುಗಲಿರುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಪಿ.ಎಸ್. ಮಚ್ಚಾಡೋ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.