ಮಡಿಕೇರಿ, ಸೆ. 1: ವಿದ್ಯಾಗಮ ಕಾರ್ಯಕ್ರಮ ಹಾಗೂ ‘ಲರ್ನಿಂಗ್ ಎನ್‍ಹಾನ್ಸ್‍ಮೆಂಟ್ ಪ್ರೋಗ್ರಾಂ’ ಜಿಲ್ಲಾ ಮತ್ತು ತಾಲೂಕು ಹಂತದಲ್ಲಿ ಸಹಾಯವಾಣಿ ಪ್ರಾರಂಭ ಮಾಡಲಾಗಿದೆ. ಈ ಕಾರ್ಯಕ್ರಮದ ಬಗ್ಗೆ ಶಿಕ್ಷಕರು, ಪೋಷಕರು, ಮಕ್ಕಳು ಇವರಿಗೆ ಕಾರ್ಯಕ್ರಮದ ಕುರಿತಾದ ಯಾವುದೇ ಗೊಂದಲಗಳಿಗೆ ಜಿಲ್ಲಾ ಮಟ್ಟದ ಸಹಾಯವಾಣಿ ಸಂಖ್ಯೆ : 08272-228337, ತಾಲೂಕು ಮಟ್ಟದ ಸಹಾಯವಾಣಿ ಮಡಿಕೇರಿ-08272-228133, ಸೊಮವಾರಪೇಟೆ 08276-284459, ವೀರಾಜಪೇಟೆ 08274-260808 ಈ ದೂರವಾಣಿ ಸಂಖ್ಯೆಗಳಿಗೆ ಕರೆ ಮಾಡಬಹುದು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರು ತಿಳಿಸಿದ್ದಾರೆ.