ಸೋಮವಾರಪೇಟೆ, ಸೆ.1: ಪೋಷಕರು ತಿಳಿಹೇಳಿದ್ದಕ್ಕೆ ಮನನೊಂದು ಬಾಲಕನೋರ್ವ ಮನೆಯಲ್ಲೇ ನೇಣಿಗೆ ಶರಣಾಗಿರುವ ಘಟನೆ ತಾಲೂಕಿನ ಮಾದಾಪುರದಲ್ಲಿ ಸಂಭವಿಸಿದೆ. ಮಾದಾಪುರದಲ್ಲಿ ಆಟೋ ಚಾಲಕರಾಗಿರುವ, ಮೂವತ್ತೊಕ್ಲು ಕಲ್ಲುಕೋರೆ ನಿವಾಸಿ ದೇವದಾಸ್ ಎಂಬವರ ಪುತ್ರ ಎನ್.ಡಿ. ಪ್ರೀತಂ ಎಂಬಾತನೇ ನೇಣಿಗೆ ಶರಣಾದ ದುರ್ದೈವಿ. ಓದುವದಕ್ಕಿಂತ ಅಟವಾಡುವದಕ್ಕೆ ಹೆಚ್ಚಿನ ಸಮಯ ವನ್ನು ವಿನಿಯೋಗಿ ಸುತ್ತಿದ್ದ ಪುತ್ರನಿಗೆ ಆನ್‍ಲೈನ್ ಕ್ಲಾಸ್‍ನಲ್ಲಿ ಭಾಗವಹಿಸು ವಂತೆ ಪೋಷಕರು ಬುದ್ದಿ ಹೇಳಿದ್ದಾರೆ. ಇಷ್ಟಕ್ಕೇ ಬೇಸರಿಸಿಕೊಂಡು ಮಲಗುವ ಕೋಣೆಯ ಕಬ್ಬಿಣದ ಪೈಪ್‍ಗೆ ನೈಲಾನ್ ಹಗ್ಗದಿಂದ ನೇಣು ಬಿಗಿದು ಕೊಂಡಿದ್ದಾನೆ. ಹೊರ ತೆರಳಿದ್ದ ಪೋಷಕರು ಮನೆಗೆ ವಾಪಸ್ ಆದ ಸಂದರ್ಭ ಘಟನೆ ಬೆಳಕಿಗೆ ಬಂದಿದೆ. ಈ ಬಗ್ಗೆ ಮೃತ ಬಾಲಕನ ತಂದೆ ದೇವದಾಸ್ ಅವರು ಸೋಮವಾರ ಪೇಟೆ ಠಾಣೆಗೆ ದೂರು ನೀಡಿದ್ದಾರೆ.