ಪೆÇನ್ನಂಪೇಟೆ, ಸೆ. 1: ಹೈಸೊಡ್ಲೂರುವಿನಲ್ಲಿ ನಿವೇಶನ ರಹಿತ ಪರಿಶಿಷ್ಟ ವರ್ಗದ ಮೇಲೆ ನಿರಂತರ ದೌರ್ಜನ್ಯ ನಡೆಯುತ್ತಿದ್ದು, ಜಿಲ್ಲಾಡಳಿತ ಹಾಗೂ ಕಂದಾಯ ಇಲಾಖೆ ಮೇಲ್ವರ್ಗದ ಪರವಾಗಿ ವರ್ತಿಸುತ್ತಿದೆ ಎಂದು ವೀರಾಜಪೇಟೆ ತಾಲೂಕು ಜೆಡಿಎಸ್ ಮಹಿಳಾ ಘಟಕದ ಅಧ್ಯಕ್ಷೆ ಪಡಿಕಲ್ ಕುಸುಮಾ ಚಂದ್ರಶೇಖರ್ ಆರೋಪಿಸಿದ್ದಾರೆ.
ಹೈಸೊಡ್ಲೂರು, ಹುದಿಕೇರಿ, ಬಿಟ್ಟಂಗಾಲ ಇತ್ಯಾದಿ ಗ್ರಾಮಗಳಲ್ಲಿ ಕಂದಾಯ ಭೂಮಿ ಇದ್ದು ನಿವೇಶನ ರಹಿತರಿಗೆ ವಿತರಣೆ ಮಾಡುವಂತೆ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರನ್ನು ಖುದ್ದು ಭೇಟಿಯಾಗಿ ಮನವಿ ಪತ್ರವನ್ನು ಸಲ್ಲಿಸಿದ್ದೆ. ಈ ಬಗ್ಗೆ ಒಂದು ತಿಂಗಳಾದರೂ ಜಿಲ್ಲಾಧಿಕಾರಿಗಳು ಹಾಗೂ ವೀರಾಜಪೇಟೆ ತಹಶೀಲ್ದಾರರಿಂದ ಸೂಕ್ತ ಸ್ಪಂದನ ಸಿಕ್ಕಿರುವದಿಲ್ಲ. ಇದೀಗ ಅನ್ಯದಾರಿ ಇಲ್ಲದೆ ವೀರಾಜಪೇಟೆ ತಾಲೂಕು ಜೆಡಿಎಸ್ ಮಹಿಳಾ ಘಟಕದ ವತಿಯಿಂದ ತಾ. 5 ರಂದು ಬೆಳಿಗ್ಗೆ 10 ಗಂಟೆಯಿಂದ ಪಕ್ಷದ ಕಾರ್ಯಕರ್ತರು, ಅಭಿಮಾನಿಗಳು ಹಾಗೂ ನಿವೇಶನ ರಹಿತರನ್ನು ಸಂಘಟಿಸಿ ಹೈಸೊಡ್ಲೂರು ಗ್ರಾಮದಲ್ಲಿ ಉಪವಾಸ ಸತ್ಯಾಗ್ರಹ ಆರಂಭಿಸಲಿ ರುವದಾಗಿ ಅವರು ತಿಳಿಸಿದ್ದಾರೆ.