ನಾಪೆÇೀಕ್ಲು, ಸೆ. 1: ನಾಲ್ಕುನಾಡಿನ ಕೈಲ್ ಮುಹೂರ್ತ ಹಬ್ಬದ ಪ್ರಯುಕ್ತ ಬೇತು ಗ್ರಾಮದ ಸರಕಾರಿ ಪ್ರಾಥಮಿಕ ಶಾಲೆಯ ಮೈದಾನದಲ್ಲಿ ಸ್ಥಳೀಯ ತಂಡಗಳ ನಡುವೆ ಕ್ರಿಕೆಟ್ ಪಂದ್ಯಾವಳಿಯನ್ನು ಆಯೋಜಿಸಲಾಗಿತ್ತು.

ಪಂದ್ಯಾಟವು ಬೇತು ಯಂಗ್‍ಸ್ಟರ್ ಮತ್ತು ಮಕ್ಕಿ ದೇವಾಲಯ ಯುವ ಸಂಘದ ನಡುವೆ ನಡೆದು ಬೇತು ಯಂಗ್‍ಸ್ಟರ್ ತಂಡವು ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು. ನಂತರ ನಡೆದ ಸಮಾರಂಭದಲ್ಲಿ ಮಾಜಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಕಾಳೇಯಂಡ ಸಾಬ ತಿಮ್ಮಯ್ಯ. ಮುಖ್ಯ ಅತಿಥಿಯಾಗಿ ಆಗಮಿಸಿ ಎರಡು ತಂಡಗಳಿಗೆ ನಗದು ಬಹುಮಾನವನ್ನು ನೀಡಿದರು. ನಂತರ ಮಾತನಾಡಿದ ಅವರು, ಕೈಲ್ ಮುಹೂರ್ತ ಪ್ರತಿ ವರ್ಷವು ಕ್ರೀಡಾಕೂಟವನ್ನು ಹಮ್ಮಿಕೊಳ್ಳಲಾಗುತ್ತಿದ್ದು, ಈ ವರ್ಷ ಕೊರೊನಾ ಮತ್ತು ಪ್ರಕೃತಿ ವಿಕೋಪದಿಂದ ಕಾರ್ಯಕ್ರಮವನ್ನು ಸರಳವಾಗಿ ನಡೆಸಲಾಗಿದೆ ಎಂದರು. ಕಾರ್ಯಕ್ರಮದಲ್ಲಿ ಬೊಳ್ಳೆಪಂಡ ರೋಷನ್ ನೆರೆದಿದ್ದ ಗ್ರಾಮಸ್ಥರಿಗೆ ತಂಪು ಪಾನೀಯ ವಿತರಿಸಿದರು.

ಈ ಸಂದರ್ಭ ಗ್ರಾಮಸ್ಥರಾದ ಚೋಕಿರ ರೋಷನ್, ಚೋಕಿರ ಅಶೋಕ, ಸಜೀತ್, ಕನ್ನಂಡ ಬೋಪಣ್ಣ, ಹರೀಶ್ ಮತ್ತಿತರರು ಇದ್ದರು.