ಪೆÇನ್ನಂಪೇಟೆ, ಸೆ. 1: ಅರಣ್ಯವಾಸಿಗಳಿಗೆ ಗೌರವದ ಬದುಕು ಕಟ್ಟಿಕೊಡುವ ಉದ್ದೇಶದಿಂದ ಮನಮೋಹನ್ ಸಿಂಗ್ ನೇತೃತ್ವದ ಅಂದಿನ ಕೇಂದ್ರ ಸರಕಾರ ಜಾರಿಗೆ ತಂದ ಪರಿಶಿಷ್ಟ ಪಂಗಡ ಮತ್ತು ಇತರ ಸಾಂಪ್ರದಾಯಿಕ ಅರಣ್ಯವಾಸಿಗಳ ಕಾಯ್ದೆ-2006' ಎಂಬ ಅರಣ್ಯ ಶಾಸನ ಕೊಡಗಿನಲ್ಲಿ ಅನುಷ್ಠಾನ ವಾಗುತ್ತಿಲ್ಲ ಎಂದು ಆರೋಪಿಸಿರುವ ವಿಧಾನ ಪರಿಷತ್ತಿನ ಮಾಜಿ ಸದಸ್ಯ ಸಿ.ಎಸ್. ಅರುಣ್‍ಮಾಚಯ್ಯ ಅವರು, ಈ ಅನ್ಯಾಯವನ್ನು ಪ್ರಶ್ನಿಸಿ ಗಿರಿಜನರಿಗೆ ನ್ಯಾಯ ಒದಗಿಸ ಬೇಕಾಗಿದ್ದ ಜನಪ್ರತಿನಿಧಿಗಳು ಇದೀಗ ಮೌನವಹಿಸಿದ್ದಾರೆ ಎಂದು ಆರೋಪಿಸಿದರು.

ದಿ. ಎ.ಕೆ. ಸುಬ್ಬಯ್ಯನವರ ಮೊದಲ ವರ್ಷದ ಪುಣ್ಯಸ್ಮರಣೆಯ ಅಂಗವಾಗಿ ಎ.ಕೆ. ಸುಬ್ಬಯ್ಯ-ಪೆÇನ್ನಮ್ಮ ದತ್ತಿ ಮತ್ತು ಶೈಕ್ಷಣಿಕ ಟ್ರಸ್ಟ್ ವತಿಯಿಂದ ತಿತಿಮತಿ ಸಮೀಪದ ಬಂಬುಕಾಡು ಗಿರಿಜನ ಹಾಡಿಯಲ್ಲಿ ನಡೆದ ದಿನಸಿ ಕಿಟ್‍ಗಳ ವಿತರಣಾ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಗಿರಿಜನರ ವಿರುದ್ಧ ಜಿಲ್ಲೆಯಲ್ಲಿ ಬಹುದೊಡ್ಡ ಷಡ್ಯಂತರ ಹಿಂದಿನಿಂದಲೂ ನಡೆಯುತ್ತಿದೆ. ಕೆಲ ಹಿರಿಯ ಅರಣ್ಯಾಧಿಕಾರಿಗಳು ಕೂಡ ಇದಕ್ಕೆ ಕೈಜೋಡಿಸಿದ್ದಾರೆ ಎಂದರು.

ತಿತಿಮತಿ ಸಮೀಪದ ದೇವಮಚ್ಚಿ ಯಿಂದ ಚೊಟ್ಟೆಪಾರೆ ಗಿರಿಜನ ಹಾಡಿಯವರೆಗೆ ಸುಮಾರು 174 ಕುಟುಂಬಗಳಿಗೆ ಅರಣ್ಯ ಹಕ್ಕು ಕಾಯ್ದೆಯಂತೆ ಅವರ ಭೂಮಿ ಮಂಜೂರಾತಿ ಕಡತಕ್ಕೆ ಅಂದಿನ ಕೇಂದ್ರ ಸರಕಾರ ಅನುಮೋದನೆ ನೀಡಿ ರಾಜ್ಯ ಸರಕಾರದ ವರದಿ ಕೇಳಿತು. ಆದರೆ ಕೆಲ ಭ್ರಷ್ಟ ಅರಣ್ಯ ಅಧಿಕಾರಿಗಳು ಇದಕ್ಕೆ ಅಡ್ಡಗಾಲು ಹಾಕಿದರು. ಅವರನ್ನು ಪ್ರಶ್ನಿಸುವ ಎದೆಗಾರಿಕೆ ಜನಪ್ರತಿನಿಧಿಗಳಿಗೆ ಇರಲಿಲ್ಲ ಎಂದು ದೂರಿದ ಅರುಣ್ ಮಾಚಯ್ಯ ಅವರು, ಅರಣ್ಯ ಹಕ್ಕು ಕಾಯ್ದೆ ಜಾರಿ ಯಲ್ಲಿದ್ದರೂ ಕೊಡಗಿನ ಬಹುತೇಕ ಗಿರಿಜನರು ತಮ್ಮ ಪಾರಂಪರಿಕ ಎಲ್ಲಾ ಹಕ್ಕುಗಳಿಂದ ದೂರವಿದ್ದಾರೆ. ಈ ಕಾರಣದಿಂದ ಗಿರಿಜನರು ಇಂದಿಗೂ ತಮ್ಮ ಪ್ರದೇಶದಲ್ಲಿ ವಿದ್ಯುತ್, ಅಂಗನವಾಡಿ, ಶಾಲೆ, ಆರೋಗ್ಯ ಕೇಂದ್ರ, ಸಮುದಾಯ ಭವನ ಮೊದಲಾದ ಮೂಲಭೂತ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ಅಲ್ಲದೆ, ಗಿರಿಜನರ ಸ್ಥಳಾಂತರದ ಹುನ್ನಾರ ಇನ್ನೂ ನಿಂತಿಲ್ಲ. ಈ ಕುರಿತ ಪ್ರಕ್ರಿಯೆಗಳು ನಿರಂತರವಾಗಿ ನಡೆಯುತ್ತಿದೆ. ಇದನ್ನು ಪ್ರಶ್ನಿಸುವವರು ತಮ್ಮ ಮೌನ ಮುಂದುವರಿಸಿದರೆ ಕೊಡಗು ಜಿಲ್ಲೆ ಗಿರಿಜನರಿಂದ ಮುಕ್ತವಾಗಿಬಿಡುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.

ಕೆಪಿಸಿಸಿ ಕಾನೂನು ಘಟಕದ ಅಧ್ಯಕ್ಷ, ಹಿರಿಯ ವಕೀಲ ಎ. ಎಸ್. ಪೆÇನ್ನಣ್ಣ ಮಾತನಾಡಿ, ಸಮಾಜದಲ್ಲಿ ಬಡತನ ಅನುಭವಿಸುವವರ ಸಂಖ್ಯೆ ಹೆಚ್ಚಾಗುತ್ತಿದೆ. ಕಳೆದ 6 ತಿಂಗಳಿಂದ ವ್ಯಾಪಕವಾಗಿ ಕಾಡುತ್ತಿರುವ ಕೊರೊನಾ ತಲ್ಲಣ ಜನತೆಯ ಬಡತನವನ್ನು ಮತ್ತಷ್ಟು ಹೆಚ್ಚು ಮಾಡುತ್ತಿದೆ. ಅದಕ್ಕಾಗಿ ಬಡವರಿಗೆ ಸಹಾಯ ಹಸ್ತದ ಅಗತ್ಯವಿದೆ. ಇದೀಗ ತಮಗೆ ಕೊಡಗಿನಲ್ಲಿ ಬಡವರ ಸೇವೆ ಸಲ್ಲಿಸಲು ಅವಕಾಶವೊಂದು ದೊರೆತಿದ್ದು, ತಮ್ಮ ಪೆÇೀಷಕರ ಆಶಯದಂತೆ ಬಡವರಿಗೆ ಕೈಲಾದ ಸಹಾಯ ಮಾಡಲಾಗುತ್ತಿದೆ ಎಂದರು. ಜಿ.ಪಂ. ಸದಸ್ಯೆ ಪಂಕಜ ಮಾತನಾಡಿ, ಬಡತನ ರೇಖೆಗಿಂತ ಕೆಳಗಿರುವ ಜನರನ್ನು ಮತ್ತಷ್ಟು ಬಡವರನ್ನಾಗಿಸಿದ ಕೊರೊನಾ ಸಾಂಕ್ರಾಮಿಕ ಸೋಂಕು ಸರಕಾರದ ಕೃಪಾಪೆÇೀಷಿತ ಯೋಜನೆಯಾಗಿದೆ ಎಂದು ದೂರಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಪೆÇನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೀದೇರಿರ ನವೀನ್ ಅವರು ಮಾತನಾಡಿದರು.

ಕಾರ್ಯಕ್ರಮದಲ್ಲಿ ಎಕೆಎಸ್ ಅವರ ಹಿರಿಯ ಪುತ್ರ ನರೇನ್ ಕಾರ್ಯಪ್ಪ, ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ತೀತಿರ ಧರ್ಮಜ ಉತ್ತಪ್ಪ, ತಿತಿಮತಿ ವಲಯ ಕಾಂಗ್ರೆಸ್ ಅಧ್ಯಕ್ಷ ಜಿ.ಜೆ. ವಿನಯ್‍ಕುಮಾರ್, ತಿತಿಮತಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಶಿವಕುಮಾರ್, ತಿತಿಮತಿ ವಲಯ ಯುವ ಕಾಂಗ್ರೆಸ್ ಅಧ್ಯಕ್ಷ ನವೀನ್, ಕಾಂಗ್ರೆಸ್ ಹಿರಿಯ ಮುಖಂಡ ಡಾ. ಮಧ್ಯಸ್ಥ ಹಾಗೂ ಇತರರು ಪಾಲ್ಗೊಂಡಿದ್ದರು. ಜೆ. ರಾಮು ಸ್ವಾಗತಿಸಿದರು, ಮುಸ್ತಫಾ ವಂದಿಸಿದರು. ಕಾರ್ಯಕ್ರಮದಲ್ಲಿ ತಿತಿಮತಿಯ ಸುತ್ತಮುತ್ತಲಿನ ವಿವಿಧ ಹಾಡಿಗಳ 200ಕ್ಕೂ ಹೆಚ್ಚು ಗಿರಿಜನರಿಗೆ ಮತ್ತು ತಿತಿಮತಿ ವ್ಯಾಪ್ತಿಯ ವಿವಿಧ ವರ್ಗದ ಬಡಜನತೆಗೆ ದಿನಸಿ ಕಿಟ್‍ಗಳನ್ನು ವಿತರಿಸಲಾಯಿತು.