ಚೆಟ್ಟಳ್ಳಿ, ಸೆ. 1: ಎಸ್‍ಕೆಎಸ್‍ಎಸ್‍ಎಫ್ ಜಿಸಿಸಿ - ಕೊಡಗು ವತಿಯಿಂದ ‘ಸಾಮಾಜಿಕ ಜಾಲತಾಣ ಒಳಿತು - ಕೆಡುಕು’ ಎಂಬ ವಿಷಯದ ಕುರಿತು ಹಮ್ಮಿಕೊಂಡ ಪ್ರಬಂಧ ಸ್ಪರ್ಧೆಯಲ್ಲಿ ಹ್ಯಾರಿಸ್ ಕೊಡ್ಲಿಪೇಟೆ ಪ್ರಥಮ ಹಾಗೂ ಎಂ.ಎನ್. ಮಾನ್ಸಿ ಕಾವೇರಮ್ಮ ದ್ವಿತೀಯ ಬಹುಮಾನ ಪಡೆದಿದ್ದಾರೆ.

ಅಸೀಬ ಬಾನು ಕಲ್ಲಡ್ಕ, ಜಸೀಲ ಕೊಡ್ಲಿಪೇಟೆ, ರಂಜಿತ ಮೈಸೂರು, ಶಹನಾಝ್ ಕೊಳಕೇರಿ, ಇವರುಗಳು ಪ್ರಬಂಧ ಸ್ಪರ್ಧೆಯಲ್ಲಿ,ತೀರ್ಪುಗಾರರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಸುಂಟಿಕೊಪ್ಪದಲ್ಲಿ ನಡೆದ ಸಮಾರಂಭದಲ್ಲಿ ಎಸ್‍ಕೆಎಸ್‍ಎಸ್‍ಎಫ್ ಕೊಡಗು ಜಿಲ್ಲಾ ಕಾರ್ಯದರ್ಶಿ ಶುಹೈಬ್ ಫೈಝಿ ಕೊಳಕೇರಿ ವಿಜೇತರ ಹೆಸರನ್ನು ಘೋಷಿಸಿದರು. ಕಾರ್ಯಕ್ರಮದಲ್ಲಿ ಕೊಡಗು ಜಿಲ್ಲಾ ಉಪ ಖಾಝಿ ಶೈಖುನಾ ಅಬ್ದುಲ್ಲ ಫೈಝಿ, ಮಾಜಿ ಶಾಸಕ ಕೆ.ಎಂ. ಇಬ್ರಾಹಿಂ ಮಾಸ್ಟರ್, ಉಮರ್ ಫೈಝಿ, ಇಕ್ಬಾಲ್ ಉಸ್ತಾದ್, ಎಸ್‍ಕೆಎಸ್‍ಎಸ್‍ಎಫ್ ಕೊಡಗು ಜಿಲ್ಲಾಧ್ಯಕ್ಷ ತಮ್ಲೀಕ್ ದಾರಿಮಿ ಹಾಗೂ ಜಿಲ್ಲಾ ಸಮಿತಿಯ ನೇತಾರರು, ಧಾರ್ಮಿಕ ಮುಖಂಡರುಗಳು ಭಾಗವಹಿಸಿದ್ದರು. ವಿಜೇತರಿಗೆ ಪಾರಿತೋಷÀಕ ಹಾಗೂ ಪ್ರಶಸ್ತಿ ಪತ್ರಗಳನ್ನು ನೀಡಿ ಗೌರವಿಸಲಾಗುವುದೆಂದು ಎಸ್‍ಕೆಎಸ್‍ಎಸ್‍ಎಫ್ ಜಿಸಿಸಿ- ಕೊಡಗು ಪ್ರಕಟಣೆಯಲ್ಲಿ ತಿಳಿಸಿದೆ. ಪ್ರಥಮ ಬಹುಮಾನವನ್ನು ಕ್ಲಿಯರ್ ವ್ಯೂ ಆಪ್ಟಿಕಲ್ ನೆಲ್ಲಿಹುದಿಕೇರಿ, ದ್ವಿತೀಯ ಬಹುಮಾನವನ್ನು ಬಶೀರ್ ಚೇರಂಬಾಣೆ ಹಾಗೂ ಸಮಾಧಾನಕರ ಬಹುಮಾನಗಳನ್ನು ಅಬ್ದುಲ್ ರಝಾಕ್ ಫೈಝಿ ಸೌದಿ ಅರೇಬಿಯಾ ಅವರು ನೀಡಿದ್ದಾರೆ.