ಸೋಮವಾರಪೇಟೆ, ಸೆ.1: ಇಂದು ಸಂಜೆ ಸೋಮವಾರಪೇಟೆ ವಿಭಾಗಕ್ಕೆ ಸಾಧಾರಣ ಮಳೆ ಸುರಿಯಿತು. ಕಳೆದ 10 ದಿನಗಳಿಂದ ಬಿಸಿಲಿನ ವಾತಾವರಣವಿದ್ದ ಪಟ್ಟಣದಲ್ಲಿ ಇಂದು ಸುರಿದ ಮಳೆ ತಂಪನ್ನೆರೆಯಿತು.

ನಸುಕಿನ ಜಾವದಲ್ಲಿ ಸುರಿಯಲಾರಂಭಿಸಿದ್ದ ಮಳೆ ಬೆಳಿಗ್ಗೆ 7 ಗಂಟೆಯಿಂದ ಮಾಯವಾಗಿತ್ತು. ಮಧ್ಯಾಹ್ನದವರೆಗೂ ಸುಡುಬಿಸಿಲಿನ ವಾತಾವರಣವಿತ್ತು. ಮಧ್ಯಾಹ್ನ ನಂತರ ಗುಡುಗಿನೊಂದಿಗೆ ಮಳೆ ಸುರಿಯಿತು.

ಉತ್ತಮ ಮಳೆಯಾದ್ದರಿಂದ ಕೃಷಿಕ ವರ್ಗಕ್ಕೂ ಸಮಾಧಾನ ತಂದಿತು. ಈಗಾಗಲೇ ನಾಟಿ ಮಾಡಿದ್ದ ಗದ್ದೆಗಳಲ್ಲಿ ನೀರಿನ ಮಟ್ಟ ಇಳಿಕೆಯಾಗುತ್ತಿದ್ದು, ಇಂದು ಸುರಿದ ಮಳೆಯಿಂದ ಭತ್ತದ ಗದ್ದೆಯಲ್ಲಿ ನೀರಿನ ಶೇಖರಣೆ ಪ್ರಮಾಣ ಹೆಚ್ಚಳವಾಯಿತು.