ಗುಡ್ಡೆಹೊಸೂರು, ಸೆ. 1: ಗುಡ್ಡೆಹೊಸೂರು ಸುತ್ತಮುತ್ತಲಿನಲ್ಲಿ ಸಂಜೆ 4 ಗಂಟೆ ಸಮಯದಲ್ಲಿ ಗುಡುಗು ಸಹಿತ ಭಾರೀ ಮಳೆ ಸುರಿಯಿತು. ಸಿದ್ದಾಪುರ ರಸ್ತೆಯ ಮೇಲೆ ಕೇಲವು ಭಾಗಗಳಲ್ಲಿ ಎರಡು ಅಡಿಗಳಷ್ಟು ನೀರು ನಿಂತಿದ್ದು, ಮತ್ತೆ ಕಾವೇರಿ ಪ್ರವಾಹವನ್ನು ನೆನಪಿಸುವಂತಿತ್ತು. ಕೇವಲ 30 ನಿಮಿಷದಲ್ಲಿ 2 ಇಂಚು ದಾಖಲೆ ಮಳೆ ಸುರಿಯಿತು. ಅಂಗಡಿ ಮತ್ತು ಹೊಟೇಲ್‍ಗಳಿಗೆ ನೀರು ನುಗ್ಗಿತ್ತು.