ಸೋಮವಾರಪೇಟೆ, ಸೆ. 1: ಜಿಲ್ಲಾ ದಲಿತ ಹಿತರಕ್ಷಣಾ ಒಕ್ಕೂಟದ ಪದಾಧಿಕಾರಿಗಳ ಸಭೆ ಇಲ್ಲಿನ ಅಂಬೇಡ್ಕರ್ ಭವನದಲ್ಲಿ ನಡೆಯಿತು.

ಸಭೆಯಲ್ಲಿ ನೂತನ ಸಮಿತಿಗೆ ಪದಾಧಿಕಾರಿಗಳ ನೇಮಕ ನಡೆದು, ಡಿ.ಎಸ್. ನಿರ್ವಾಣಪ್ಪ ಪುನರಾಯ್ಕೆಯಾದರು. ಗೌರವಾಧ್ಯಕ್ಷರಾಗಿ ಜಯಪ್ಪ ಹಾನಗಲ್ಲು, ಉಪಾಧ್ಯಕ್ಷರಾಗಿ ಜೆ.ಆರ್. ಪಾಲಾಕ್ಷ, ಎಂ.ಪಿ. ಹೊನ್ನಪ್ಪ, ಕೆ.ಬಿ. ರಾಜು, ಎಂ.ಎನ್. ರಾಜಪ್ಪ, ಹೆಚ್.ಬಿ. ಜಯಮ್ಮ ಆಯ್ಕೆಯಾದರು.

ಪ್ರಧಾನ ಕಾರ್ಯದರ್ಶಿಯಾಗಿ ಬಿ.ಈ. ಜಯೇಂದ್ರ, ಸಹ ಕಾರ್ಯದರ್ಶಿಯಾಗಿ ಹೆಚ್.ಹೆಚ್. ಮಂಜುನಾಥ, ಖಜಾಂಚಿಯಾಗಿ ನಾಗರಾಜು, ಪದಾಧಿಕಾರಿಗಳಾಗಿ ಮೋಹನ್ ಮೌರ್ಯ, ಡಿ.ವಿ. ಜಗದೀಶ್, ಎಸ್.ಆರ್. ವಸಂತ, ಎಂ.ಇ. ಸಣ್ಣಯ್ಯ ಹಾಗೂ ಎಸ್.ಆರ್. ಮಂಜುನಾಥ್ ಅವರುಗಳನ್ನು ಆಯ್ಕೆ ಮಾಡಲಾಯಿತು.

ಇದೇ ಸಂದರ್ಭ ಸೋಮವಾರಪೇಟೆ ತಾಲೂಕು ಸಮಿತಿಗೆ ಆಯ್ಕೆ ನಡೆದು, ಅಧ್ಯಕ್ಷರಾಗಿ ಡಿ.ಎನ್. ವಸಂತ, ಉಪಾಧ್ಯಕ್ಷರಾಗಿ ವಿಮಲಾಕ್ಷಿ ಹಾಗೂ ಚೌಡ್ಲು ಸತೀಶ್, ಪ್ರಧಾನ ಕಾರ್ಯದರ್ಶಿಯಾಗಿ ಹೆಚ್.ಕೆ. ಮಹೇಶ್, ಸಹ ಕಾರ್ಯದರ್ಶಿಯಾಗಿ ಮಹೇಶ್, ಖಜಾಂಚಿಯಾಗಿ ಬಿ.ಎಂ. ದಿನೇಶ್, ಪದಾಧಿಕಾರಿಗಳಾಗಿ ಡಿ.ಆರ್. ವೇದಕುಮಾರ್, ಬಿ.ಕೆ. ದೇವರಾಜು, ಹೆಚ್.ಪಿ. ವಿಜಯಕುಮಾರ್, ಹೆಚ್.ಬಿ. ಮೋಹನ್ ಹಾಗೂ ಎಂ.ಜಿ. ಯತೀಶ್ ನೇಮಕಗೊಂಡರು.