ಕುಶಾಲನಗರ, ಸೆ. 1: ಕಳೆದ ಕೆಲವು ಸಮಯದಿಂದ ನೆನೆಗುದಿಗೆ ಬಿದ್ದಿರುವ ಕುಶಾಲನಗರ ಹೊಸ ತಾಲೂಕು ರಚನೆ ಸಂಬಂಧ ಕೊಡಗು ಉಪ ವಿಭಾಗಾಧಿಕಾರಿಗಳ ಕಾರ್ಯಾಲಯದಿಂದ ಸರಕಾರಕ್ಕೆ ಜಿಲ್ಲಾಧಿಕಾರಿಗಳ ಮೂಲಕ ಪ್ರತ್ಯೇಕ ಪ್ರಸ್ತಾವನೆ ಸಲ್ಲಿಕೆಯಾಗಿದೆ. ಸರಕಾರದ ಆದೇಶದ ಹಿನೆÀ್ನಲೆಯಲ್ಲಿ ಈ ಪ್ರಸ್ತಾವನೆ ಸಲ್ಲಿಕೆಯಾಗಿದ್ದು ಕುಶಾಲನಗರ ತಾಲೂಕಿಗೆ ಸೇರ್ಪಡೆಗೊಳ್ಳುವ ವರದಿ: ಚಂದ್ರಮೋಹನ್ ಕುಶಾಲನಗರ, ಸೆ. 1: ಕಳೆದ ಕೆಲವು ಸಮಯದಿಂದ ನೆನೆಗುದಿಗೆ ಬಿದ್ದಿರುವ ಕುಶಾಲನಗರ ಹೊಸ ತಾಲೂಕು ರಚನೆ ಸಂಬಂಧ ಕೊಡಗು ಉಪ ವಿಭಾಗಾಧಿಕಾರಿಗಳ ಕಾರ್ಯಾಲಯದಿಂದ ಸರಕಾರಕ್ಕೆ ಜಿಲ್ಲಾಧಿಕಾರಿಗಳ ಮೂಲಕ ಪ್ರತ್ಯೇಕ ಪ್ರಸ್ತಾವನೆ ಸಲ್ಲಿಕೆಯಾಗಿದೆ. ಸರಕಾರದ ಆದೇಶದ ಹಿನೆÀ್ನಲೆಯಲ್ಲಿ ಈ ಪ್ರಸ್ತಾವನೆ ಸಲ್ಲಿಕೆಯಾಗಿದ್ದು ಕುಶಾಲನಗರ ತಾಲೂಕಿಗೆ ಸೇರ್ಪಡೆಗೊಳ್ಳುವ ರಚನೆ ಸಂಬಂಧ ಇತ್ತೀಚೆಗೆ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸುಂಟಿಕೊಪ್ಪ ಹೋಬಳಿಯ ಹರದೂರು ಗ್ರಾ.ಪಂ. ಮತ್ತು ಮಾದಾಪುರ ಗ್ರಾ.ಪಂ. ಹಾಗೂ ಗರ್ವಾಲೆ ಗ್ರಾ.ಪಂ.ಗಳ ಗ್ರಾಮಗಳನ್ನು ಸೋಮವಾರಪೇಟೆ ತಾಲೂಕಿಗೆ ಸೇರ್ಪಡೆಗೊಳಿಸುವುದು, ಕುಶಾಲನಗರ ತಾಲೂಕಿಗೆ ಸುಂಟಿಕೊಪ್ಪ ಹೋಬಳಿಯಿಂದ ಹರದೂರು ಗ್ರಾ.ಪಂ., ಮಾದಾಪುರ ಮತ್ತು ಗರ್ವಾಲೆ ಪಂಚಾಯ್ತಿಗಳ ವ್ಯಾಪ್ತಿ ಹೊರತುಪಡಿಸಿ ಸೇರ್ಪಡೆಗೊಳಿಸುವ ನಿಟ್ಟಿನಲ್ಲಿ ಚುನಾಯಿತ ಪ್ರತಿನಿಧಿಗಳಿಂದ ಆಕ್ಷೇಪ ಕೇಳಿಬಂದಿತ್ತು. ಇದೀಗ ಪರಿಶೀಲನೆ ನಡೆಸಿದ ನಂತರ ಹೊಸ ತಾಲೂಕು ರಚನೆ ಸಂಬಂಧ ಸರಕಾರದ ಸುತ್ತೋಲೆಗಳಲ್ಲಿ ತಿಳಿಸಿರುವ ಪ್ರತಿಯೊಂದು ಅಂಶಗಳನ್ನು ಗ್ರಹಿಸಿ ಕ್ರಮವಹಿಸಲಾಗಿದೆ. ಕುಶಾಲನಗರ ತಾಲೂಕು ರಚನೆ ಸಂಬಂಧ ನೂತನ ಸರಕಾರಿ ಕಟ್ಟಡಗಳಿಗೆ ಜಾಗ ಗುರುತಿಸಿ ಪರಿಶೀಲನೆ ಮಾಡಲಾಗಿದ್ದು ತಾಲೂಕು ಕಚೇರಿ ಸಂಕೀರ್ಣಕ್ಕೆ ಮುಳ್ಳುಸೋಗೆ ಗ್ರಾಮದ ಸರ್ವೆ ನಂ 47/1 ರ 9.80 ಎಕರೆ ಜಮೀನಿನ ಪೈಕಿ ಎರಡು ಎಕರೆ ಜಮೀನನ್ನು ಸರಕಾರಿ ಕಟ್ಟಡಗಳ ನಿರ್ಮಾಣಕ್ಕೆ ಗುರುತಿಸಲಾಗಿದೆ. ತಾತ್ಕಾಲಿಕ ಕಚೇರಿ ಕೆಲಸ ನಿರ್ವಹಿಸಲು ಕುಶಾಲನಗರದ ಆರ್ಎಂಸಿ ಕಟ್ಟಡದಲ್ಲಿ ಕಟ್ಟಡವನ್ನು ಗುರುತಿಸಲಾಗಿದೆ ಎಂದು ಪ್ರಸ್ತಾವನೆಯಲ್ಲಿ ತಿಳಿಸಲಾಗಿದೆ.
ಪ್ರಸಕ್ತ ಕೂಡುಮಂಗಳೂರು, ನಂಜರಾಯಪಟ್ಟಣ, ಅಭ್ಯತ್ ಮಂಗಲ,
(ಮೊದಲ ಪುಟದಿಂದ) ಹೆಬ್ಬಾಲೆ, ಶಿರಂಗಾಲ, ತೊರೆನೂರು, ಹುಲುಗುಲಿ, ಕಾಂಡನಕೊಲ್ಲಿ, ಚೇರಳ ಶಿರಂಗಾಲ, ಕಂಬಿಬಾಣೆ, ಕೊಡಗರಹಳ್ಳಿ, ಕೆದಕಲ್ ಹೋಬಳಿ ಕೇಂದ್ರಗಳನ್ನಾಗಿಸಿಕೊಂಡು ನೂತನ ಕುಶಾಲನಗರ ಕಾವೇರಿ ತಾಲೂಕು ರಚನೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ತಾಲೂಕಿನ ಗಡಿ ಭಾಗಗಳಾಗಿ ಮೈಸೂರು ಜಿಲ್ಲೆ, ಸೋಮವಾರಪೇಟೆ ತಾಲೂಕು, ಮಡಿಕೇರಿ ತಾಲೂಕು ಹಾಗೂ ವೀರಾಜಪೇಟೆ ತಾಲೂಕನ್ನು ಗುರುತಿಸಲಾಗಿದೆ.
ಹೋಬಳಿ ಕೇಂದ್ರಗಳ ವಿವರ: ಕೂಡುಮಂಗಳೂರು ವ್ಯಾಪ್ತಿಯಲ್ಲಿ ಚಿಕ್ಕತ್ತೂರು, ಕೂಡ್ಲೂರು, ಬಸವನತ್ತೂರು, ದೊಡ್ಡತ್ತೂರು, ಹುಲುಗುಂದ, ನಂಜರಾಯಪಟ್ಟಣ ಕೇಂದ್ರದ ಅಡಿಯಲ್ಲಿ ನಂಜರಾಯಪಟ್ಟಣ, ರಂಗಸಮುದ್ರ, ಹೊಸಪಟ್ಟಣ, ವಿರುಪಾಕ್ಷಪುರ, ವಾಲ್ನೂರು ತ್ಯಾಗತ್ತೂರು, ರಸೂಲ್ಪುರ, ಚಿಕ್ಕಬೆಟಗೇರಿ, ಅಭ್ಯತ್ಮಂಗಲ ವ್ಯಾಪ್ತಿಗೆ ಅಭ್ಯತ್ಮಂಗಲ, ಕೂಡ್ಲೂರು ಚೆಟ್ಟಳ್ಳಿ, ನೆಲ್ಲಿಹುದಿಕೇರಿ, ಹೆಬ್ಬಾಲೆ ಹೋಬಳಿಗೆ ಹೆಬ್ಬಾಲೆ, ಮರೂರು, ಹಳಗೋಟೆ, 6ನೇ ಹೊಸಕೋಟೆ, ಚಿನ್ನನೇನಹಳ್ಳಿ, ಕೆಸಲಗೋಡು, ಹುಲುಸೆ, ರಾಂಪುರ, ಶಿರಂಗಾಲ ಕೇಂದ್ರ ವ್ಯಾಪ್ತಿಯಲ್ಲಿ ಶಿರಂಗಾಲ, ಮಣಜೂರು, ಚಿಕ್ಕನಾಯಕನ ಹೊಸಳ್ಳಿ, ನಲ್ಲೂರು, ತೊರೆನೂರು ಹೋಬಳಿ ಕೇಂದ್ರ ವ್ಯಾಪ್ತಿಗೆ ತೊರೆನೂರು, ಚಿಕ್ಕಅಳುವಾರ, ದೊಡ್ಡಅಳುವಾರ, ಅರಸಿನಗುಪ್ಪೆ, ಅಳಿಲುಗುಪ್ಪೆ, ಬಸಿರುಗುಪ್ಪೆ, ಸಿದ್ದಲಿಂಗಪುರ, ಅಂದಾನಿಪುರ, ಗದ್ದೆಹೊಸಳ್ಳಿ, ಹುಲುಗುಲಿ ವ್ಯಾಪ್ತಿಗೆ ಹುಲುಗುಲಿ, ನಾರ್ಗಾಣೆ, ಸುಂಟಿಕೊಪ್ಪ ಟೌನ್, ಕೆದಕಲ್ ಹೋಬಳಿಯ ಅಡಿಯಲ್ಲಿ ಕೆದಕಲ್, ಹಾಲೇರಿ, ಹೊರೂರು, ಮೋದೂರು, ಕೊಡಗರಹಳ್ಳಿ ಹೋಬಳಿಯಲ್ಲಿ ಅಂದಗೋವೆ, ಕೊಡಗರಹಳ್ಳಿ, ಕಾನ್ಬೈಲ್ ಬೈಚನಹಳ್ಳಿ, ಹೇರೂರು, ಹಾದ್ರೆ, ಮಳೂರು, ಕಂಬಿಬಾಣೆ ಕೇಂದ್ರದ ಅಡಿಯಲ್ಲಿ 7ನೆ ಹೊಸಕೋಟೆ, ಅತ್ತೂರು ನಲ್ಲೂರು, ಚೇರಳ ಶ್ರೀಮಂಗಲ ವ್ಯಾಪ್ತಿಯಲ್ಲಿ ಚೇರಳ ಶ್ರೀಮಂಗಲ, ಈರಳವಳಮುಡಿ, ಕಾಂಡನಕೊಲ್ಲಿ ವ್ಯಾಪ್ತಿಯ ಕಾಂಡನಕೊಲ್ಲಿ, ಕೊಪ್ಪತ್ತೂರು, ಕಡಗದಾಳು ಸೇರಿದಂತೆ 29 ಕೇಂದ್ರಗಳ ವ್ಯಾಪ್ತಿಗಳು ಕುಶಾಲನಗರ ತಾಲೂಕಿಗೆ ಸೇರ್ಪಡೆಗೊಳ್ಳಲಿವೆ.
ಈ ಬಗ್ಗೆ ಈಗಾಗಲೇ ಸೋಮವಾರಪೇಟೆ ತಹಶೀಲ್ದಾರ್, ಕೆಡಿಪಿ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಕೂಡ ಈ ಬಗ್ಗೆ ಚರ್ಚೆಗಳು ನಡೆದಿದ್ದು ಜಿಲ್ಲಾ ಉಸ್ತುವಾರಿ ಸಚಿವರ ಸಮ್ಮುಖದಲ್ಲಿ ಸಭೆ ನಡೆದಿರುವುದನ್ನು ಗಮನಿಸಬಹುದು.