ಮಡಿಕೇರಿ, ಆ. 31: ಜಿಲ್ಲೆಯಲ್ಲಿ 31 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿವೆ. ಇದುವರೆಗೆ 1458 ಪ್ರಕರಣಗಳು ಪತ್ತೆಯಾಗಿದ್ದು, 1178 ಮಂದಿ ಗುಣಮುಖರಾಗಿದ್ದಾರೆ. ಒಟ್ಟು 21 ಮಂದಿ ಸಾವನ್ನಪ್ಪಿದ್ದು, 257 ಪ್ರಕರಣಗಳು ಸಕ್ರಿಯವಾಗಿವೆ.
ಸೋಂಕಿತರ ಪೈಕಿ ಕೋವಿಡ್ ಆಸ್ಪತ್ರೆಯಲ್ಲಿ 78 ಮಂದಿ, ಕೋವಿಡ್ ಕೇರ್ ಸೆಂಟರ್‍ನಲ್ಲಿ 54 ಮಂದಿ ಹಾಗೂ ಹೋಮ್ ಐಸೋಲೇಷನ್‍ನಲ್ಲಿ 125 ಮಂದಿ ದಾಖಲಾಗಿದ್ದಾರೆ. ಜಿಲ್ಲೆಯಾದ್ಯಂತ 245 ನಿಯಂತ್ರಿತ ವಲಯಗಳಿವೆ.
ಹೊಸ ಪ್ರಕರಣಗಳ ವಿವರ
ಮಡಿಕೇರಿ ಮೈತ್ರಿ ಹಾಲ್ ಬಳಿಯ ಪೆÇಲೀಸ್ ವಸತಿಗೃಹದ 23 ವರ್ಷದ 2 ಪುರುಷರು, ಮಡಿಕೇರಿ ಎಫ್.ಎಂ.ಸಿ. ಕಾಲೇಜು ಹಿಂಭಾಗದ 62 ವರ್ಷದ ಪುರುಷ, ನೆಲ್ಲಿಹುದಿಕೇರಿಯ ಬರಡಿ ಗ್ರಾಮದ 49 ವರ್ಷದ ಪುರುಷ, ನಾಪೆÇೀಕ್ಲು ಕಲ್ಲುಮೊಟ್ಟೆಯ ವೆಂಕಟೇಶ್ವರ ದೇವಾಲಯ ಬಳಿಯ 45 ವರ್ಷದ ಮಹಿಳೆ, 8 ವರ್ಷದ ಬಾಲಕ, 20 ಮತ್ತು 67 ವರ್ಷದ ಮಹಿಳೆ, ವೀರಾಜಪೇಟೆ ಚೆನ್ನಯ್ಯನಕೋಟೆಯ ಕೋಟೆ ಪೈಸಾರಿಯ 42 ವರ್ಷದ ಮಹಿಳೆ,ವೀರಾಜಪೇಟೆ ಗಾಂಧಿನಗರ ವಾಟರ್ ಟ್ಯಾಂಕ್ ಬಳಿಯ 41 ವರ್ಷದ ಪುರುಷ,
ಸುಂಟಿಕೊಪ್ಪ ಶ್ರೀದೇವಿ ಲೇಔಟಿನ 27 ವರ್ಷದ ಮಹಿಳೆ, ಸೋಮವಾರಪೇಟೆ ಕುಸ್ಬೂರು ಗ್ರಾಮ ಮತ್ತು ಅಂಚೆಯ ಗಾಲ್ಫ್ ಮೈದಾನ ಸಮೀಪದ 70 ವರ್ಷದ ಪುರುಷ, ಸೋಮವಾರಪೇಟೆ ಕವಡಿಕಟ್ಟೆಯ 26 ವರ್ಷದ ಮಹಿಳೆ, ಮೈಸೂರಿನ 58 ವರ್ಷದ ಮಹಿಳೆ, 61 ವರ್ಷದ ಪುರುಷ ಮತ್ತು 26 ವರ್ಷದ ಮಹಿಳೆ, ಸೋಮವಾರಪೇಟೆ ಬಸವೇಶ್ವರ ರಸ್ತೆಯ ಶ್ರೀಹರಿ ಸ್ಟೋರ್ಸ್ ಸಮೀಪದ 48 ವರ್ಷದ ಪುರುಷ, ಮಡಿಕೇರಿ ಮೈತ್ರಿ ಹಾಲ್ ಸಮೀಪದ 29 ಮತ್ತು 28 ವರ್ಷದ 2 ಪುರುಷರು, ಮಡಿಕೇರಿ ತ್ಯಾಗರಾಜ ನಗರದ ಅಂಗನವಾಡಿ ಬಳಿಯ 48 ವರ್ಷದ ಮಹಿಳೆ, ಮಡಿಕೇರಿ ಚೈನ್‍ಗೇಟ್ ಸಮೀಪದ ಪೆÇಲೀಸ್ ವಸತಿಗೃಹದ 34 ವರ್ಷದ ಪುರುಷ, ನಗರದ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ವೃತ್ತ ಬಳಿಯ 55 ವರ್ಷದ ಪುರುಷ. ನಾಪೆÇೀಕ್ಲುವಿನ ಹಳೆತಾಲೂಕಿನ 42 ವರ್ಷದ ಪುರುಷ, ಮಡಿಕೇರಿ ಖಾಸಗಿ ಬಸ್ ನಿಲ್ದಾಣ ಬಳಿಯ 25 ವರ್ಷದ ಪುರುಷ, ಗೌಳಿಬೀದಿಯ 43 ವರ್ಷದ ಪುರುಷ, ಸಿದ್ದಾಪುರದ ಮಟ್ಟ ಗ್ರಾಮದ ಮುತ್ತಪ್ಪ ದೇವಾಲಯ ಬಳಿಯ 15 ವರ್ಷದ ಮಹಿಳೆ, ಸೋಮವಾರಪೇಟೆ ತ್ಯಾಗತ್ತೂರು ಬಸ್ ನಿಲ್ದಾಣ ಬಳಿಯ 62 ವರ್ಷದ ಮಹಿಳೆ, ವೀರಾಜಪೇಟೆ ಮೀನುಪೇಟೆಯ ಮಲಬಾರ್ ರಸ್ತೆಯ ಹೊಸ ಅರ್ಜಿ ಸೇತುವೆ ಬಳಿಯ 40 ವರ್ಷದÀ ಪುರುಷ, ಗೋಣಿಕೊಪ್ಪದ ಅರ್ವತ್ತೊಕ್ಲುವಿನ ಮೈಸೂರಮ್ಮ ನಗರದ 65 ವರ್ಷದ ಪುರುಷ, ವೀರಾಜಪೇಟೆ ಕಾಕೋಟುಪರಂಬು ಅಂಚೆಯ ನಾಲ್ಕೇರಿ ಗ್ರಾಮದ 33 ವರ್ಷದ ಮಹಿಳೆ, ಗುಡ್ಡೆಹೊಸೂರು ಮಾದಾಪಟ್ಟಣದ 31 ವರ್ಷದ ಪುರುಷ, ಸೋಮವಾರಪೇಟೆ ಅಬ್ಬೂರುಕಟ್ಟೆ ಬಳಿಯ 69 ವರ್ಷದ ಪುರುಷ, ಶಿರಂಗಾಲ ತೊರೆನೂರಿನ ರೇಷ್ಮೆಹುಳು ಸಾಕಾಣಿಕೆ ಕೇಂದ್ರ ಬಳಿಯ 58 ವರ್ಷದ ಮಹಿಳೆ ಮತ್ತು 68 ವರ್ಷದ ಪುರುಷ, ಶಿರಂಗಾಲ ಕಾಡಬಸವೇಶ್ವರ ದೇವಾಲಯ ಬಳಿಯ 50 ಮತ್ತು 28 ವರ್ಷದ ಮಹಿಳೆಯರು, ಮಡಿಕೇರಿ ಬೋಯಿಕೇರಿಯ ಇಬ್ನಿವಳವಾಡಿಯ ಬಿ.ಎಸ್.ಎನ್.ಎಲ್. ಟವರ್ ಬಳಿಯ 46 ವರ್ಷದÀ ಮಹಿಳೆ, ಕುಶಾಲನಗರ ಹೆಬ್ಬಾಲೆ ಮುಖ್ಯ ರಸ್ತೆಯ ಕೆನರಾ ಬ್ಯಾಂಕ್ ಎದುರಿನ 93 ವರ್ಷದ ಪುರುಷ, ಮೈಸೂರು ಬೈಲುಕೊಪ್ಪದ 58 ವರ್ಷದ ಮಹಿಳೆ, ಗೋಣಿಕೊಪ್ಪ ಟೆಲಿಫೆÇೀನ್ ಎಕ್ಸ್ ಚೇಂಜ್ ಬಳಿಯ 50 ವರ್ಷದ ಪುರುಷನಿಗೆ ಸೋಂಕು ದೃಢಪಟ್ಟಿದೆ.