ಮಡಿಕೇರಿ, ಆ. 31: ಮಡಿಕೇರಿಯ ಹಳೆಯ ಖಾಸಗಿ ಬಸ್ ನಿಲ್ದಾಣದಲ್ಲಿ ಸ್ಕ್ವಾ|| ಲೀ|| ಅಜ್ಜಮಾಡ ದೇವಯ್ಯ ವೃತ್ತದಲ್ಲಿ ಕಳೆದ ರಾತ್ರಿ ಅವರ ಪ್ರತಿಮೆಯನ್ನು ಕ್ರೇನ್ ಮೂಲಕ ಅಳವಡಿಸಲಾಗಿದೆ. ಈ ನಿಟ್ಟಿನಲ್ಲಿ ಪ್ರಯತ್ನ ನಡೆಸುತ್ತಿರುವ ಕೊಡವ ಮಕ್ಕಡ ಕೂಟದ ಅಧ್ಯಕ್ಷ ಬೊಳ್ಳಜೀರ ಅಯ್ಯಪ್ಪ, ಅಜ್ಜಮಾಡ ಕುಟುಂಬಸ್ಥರಾದ ಬೋಪಣ್ಣ, ಚಂಗಪ್ಪ, ನವೀನ್, ಕುಟ್ಟಪ್ಪ, ಗ್ರೀನ್ ಸಿಟಿ ಫೋರಂ ಚೈಯ್ಯಂಡ ಸತ್ಯ, ವಕೀಲ ಕೃಷ್ಣಮೂರ್ತಿ, ಭಜರಂಗದಳದ ಅಜಿತ್, ಕವನ್ ಮತ್ತಿತರರು ಹಾಜರಿದ್ದರು.