ನಾಪೋಕ್ಲು, ಆ. 31: ಇಲ್ಲಿನ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ರಸ್ತೆಯಲ್ಲಿ ಭಾರತೀಯ ಸ್ಟೇಟ್ ಬ್ಯಾಂಕಿನ ಕೇಂದ್ರವನ್ನು ತೆರೆಯಲಾಯಿತು. ಕಲ್ಲುಮೊಟ್ಟೆ ನಿವಾಸಿ ಕಿಶನ್ ಕುಮಾರ್ ಮಾಲೀಕತ್ವದಲ್ಲಿ ತೆರೆಯಲಾದ ಸೇವಾಕೇಂದ್ರವನ್ನು ಜಿಲ್ಲಾ ಪಂಚಾಯಿತಿ ಸದಸ್ಯ ಪಾಡಿಯಮ್ಮಂಡ ಮುರಳಿ ಕರುಂಬಮ್ಮಯ್ಯ ಉದ್ಘಾಟಿಸಿದರು. ಗ್ರಾಮ ಪಂಚಾಯಿತಿ ಮಾಜಿ ಸದಸ್ಯೆ ಸುಶೀಲಮ್ಮ ಹಾಗೂ ಬಜರಂಗ ದಳದ ಅಧ್ಯಕ್ಷ ಬಿ.ಎಂ.ಪ್ರತೀಪ್ ಪಾಲ್ಗೊಂಡಿದ್ದರು.