ಮಡಿಕೇರಿ, ಆ. 31: ಕುಶಾಲನಗರದ ಮಂಗಳವಾರದ ಸಂತೆ 5 ತಿಂಗಳುಗಳಿಂದ ಸ್ಥಗಿತವಾಗಿತ್ತು.ಇದರಿಂದ ಕೊಡಗು, ಹಾಸನ,ಮೈಸೂರು ಜಿಲ್ಲೆಯ ರೈತಾಪಿ ವರ್ಗ ಸಂಕಷ್ಟಕ್ಕೆ ಈಡಾಗಿದ್ದರು. ಇದನ್ನು ಮನಗಂಡು ಕುಶಾಲನಗರದ ಮಾರುಕಟ್ಟೆ ವ್ಯಾಪಾರಿ ಸಂಘ ತಾ. 1 ರಿಂದ (ಇಂದಿನಿಂದ) ಸಂತೆಯನ್ನು ಪುನರಾರಂಭ ಗೊಳಿಸಲಿದೆ.
ಎಂದಿನಂತೆ ನಡೆಯುತ್ತಿದ್ದ ಮಂಗಳವಾರದ ಸಂತೆ ಕುಶಾಲನಗರದ ಕೆಇಬಿ ಮುಂಭಾಗದಲ್ಲಿ ನಡೆಯಲಿದ್ದು ವ್ಯಾಪಾರಸ್ಥರು ಹಾಗೂ ಖರೀದಿದಾರರು ಸಹಕರಿಸಬೇಕಾಗಿ ಮಾರುಕಟ್ಟೆ ವ್ಯಾಪಾರಿ ಸಂಘ ಮನವಿ ಮಾಡಿಕೊಂಡಿದೆ.