ಕಡಂಗ, ಆ. 31 ಪ್ರತಿಯೊಬ್ಬ ವಿದ್ಯಾರ್ಥಿಗಳು ತಮ್ಮ ಮುಂದಿನ ಭವಿಷ್ಯ ರೂಪಿಸಿಕೊಳ್ಳಲು ಶಿಕ್ಷಣದ ಮೂಲಕ ಸಮಾಜದ ಮುಖ್ಯ ವಾಹಿನಿಗೆ ಬರಬೇಕೆಂದು ರಾಜ್ಯ ಪ್ರಶಸ್ತಿ ವಿಜೇತ ನಿವೃತ್ತ ಶಿಕ್ಷಕ ಉಮ್ಮರ್ ಮಾಸ್ಟರ್ ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಎನ್.ಸಿ.ಟಿ. ಎಂಟರ್‍ಪ್ರೈಸಸ್ ಕಚೇರಿಯ ಸಭಾಂಗಣದಲ್ಲಿ ಪಿ.ಯು.ಸಿ. ಮತ್ತು ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಕೊಡಗು ದಫ್ ಸಮಿತಿ ವತಿಯಿಂದ ಸನ್ಮಾನ ಗೌರವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಹೆಚ್ಚು ಮೊಬೈಲ್ ಬಳಕೆಯಿಂದ ದೂರವಿದ್ದು ಉನ್ನತ ಶಿಕ್ಷಣ ಪಡೆದು ಸಮಾಜದಲ್ಲಿ ಗೌರವಯುತವಾಗಿ ಸೇವೆ ಮಾಡುವ ಮೂಲಕ ಸಮಾಜದಲ್ಲಿ ಗುರುತಿಸಿ ಕೊಳ್ಳುವಂತಾಗಬೇಕೆಂದು ಹೇಳಿದರು.

ಕಾರ್ಯಕ್ರಮದಲ್ಲಿ ಕೊಡಗು ದಫ್ ಸಮಿತಿ ಅಧ್ಯಕ್ಷ ಅಲೀರ ಎಂ. ರಷೀದ್, ಸ್ಥಾಪಕ ಅಧ್ಯಕ್ಷ ಮಜೀದ್ ಚೋಕಂಡಳ್ಳಿ, ಗೌರವ ಅಧ್ಯಕ್ಷ ಅಕ್ಕಳತಂಡ ಮೊಯ್ದು, ಉಪಾಧ್ಯಕ್ಷ ಜುಬೈರ್ ಕಡಂಗ, ಖಜಾಂಚಿ ಬಷೀರ್. ಆಡಳಿತ ಮಂಡಳಿಯ ಪ್ರಮುಖರಾದ ಜುಬೈರ್ ಮುಸ್ಲಿಯಾರ್, ಅಶ್ರಫ್ ಎಮ್ಮೆಮಾಡು, ಅಬ್ಬಾಸ್ ಜೈನಿ, ಅಶ್ರಪ್ ವಯಕ್ಕೋಲ್, ತೌಸೀಫ್ ಅಮ್ಮತ್ತಿ ಸೇರಿದಂತೆ ವಿದ್ಯಾರ್ಥಿಗಳು ಹಾಗೂ ಪೋಷಕರು ಹಾಜರಿದ್ದರು.