ಮಡಿಕೇರಿ, ಆ. 31 : ವಿಶೇಷಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯು ಪ್ರಸಕ್ತ ಸಾಲಿನ ಫಲಾನುಭವಿ ಆಧಾರಿತ ಯೋಜನೆಯಡಿ ಧನ ಸಹಾಯ ಮಂಜೂರಾತಿ ಕೋರಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ವಿಶೇಷಚೇತನ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ಮತ್ತು ಪ್ರೋತ್ಸಾಹಧನ, 10ನೇ ತರಗತಿ ನಂತರದ ಕೋರ್ಸುಗಳಲ್ಲಿ ಅಭ್ಯಸಿಸುತ್ತಿರುವ ವಿದ್ಯಾರ್ಥಿಗಳಿಗೆ ಪಾವತಿಸುವ ಶುಲ್ಕವನ್ನು ಮರುಪಾವತಿಸಲು ಧನ ಸಹಾಯ, ವಿಶೇಷಚೇತನರಿಗೆ ಅವಶ್ಯವಿರುವ ಸಾಧನ ಸಲಕರಣೆಗಳು, ವಿಶೇಷಚೇತನ ವ್ಯಕ್ತಿಗಳನ್ನು ವಿವಾಹವಾಗುವ ಸಾಮಾನ್ಯ ವ್ಯಕ್ತಿಗಳಿಗೆ ಪ್ರೋತ್ಸಾಹಧನ, ವಿಶೇಷಚೇತನ ವ್ಯಕ್ತಿಗಳು ವಿಕಲತೆ ಭಾಗವನ್ನು ಸರಿಪಡಿಸುವ ಭಾಗಶಃ ಸರಿಪಡಿಸುವ ಶಸ್ತ್ರ ಚಿಕಿತ್ಸೆಗೊಳಪಟ್ಟಲ್ಲಿ ಧನಸಹಾಯ, ಅಂಧ ಮಹಿಳೆಗೆ ಜನಿಸುವ ಮೊದಲ ಎರಡು ಶಿಶುಪಾಲನೆಗಾಗಿ ಸಹಾಯಧನ, 10ನೇ ತರಗತಿ ಉತ್ತೀರ್ಣರಾದ ನಿರುದ್ಯೋಗಿ ವಿಶೇಷಚೇತನರಿಗೆ ನಿರುದ್ಯೋಗಿ ಭತ್ಯೆ, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಹಾಜರಾಗುವ ವಿಶೇಷಚೇತನರಿಗೆ ಕೋಚಿಂಗ್‍ಗಾಗಿ ಧನಸಹಾಯ, 10ನೇ ತರಗತಿ ನಂತರದ ಅಂಧ ವಿದ್ಯಾರ್ಥಿಗಳಿಗೆ ಟಾಕಿಂಗ್ ಲ್ಯಾಪ್‍ಟಾಪ್ ನೀಡುವ ಯೋಜನೆ, ನಾಲ್ಕು ಬಗೆಯ ವಿಶೇಷಚೇತನ ವ್ಯಕ್ತಿಗಳಿಗೆ ವಾರ್ಷಿಕ ರೂ. 1 ಲಕ್ಷಗಳವರೆಗೆ ವೈದ್ಯಕೀಯ ಸೌಲಭ್ಯ ಪಡೆಯುವ ಯೋಜನೆ ಹಾಗೂ ಕ್ರೀಡೆ ಮತ್ತು ಸಾಂಸ್ಕøತಿಕ ಕಾರ್ಯಕ್ರಮಗಳಲ್ಲಿ ರಾಜ್ಯ ಮತ್ತು ಅಂತರಾಜ್ಯ ಮಟ್ಟದಲ್ಲಿ ವಿಜೇತರಾದವರಿಗೆ ವಿಶೇಷ ಧನ ಸಹಾಯ, ಮುಂತಾದ ಯೋಜನೆಗಳಡಿ ಅರ್ಜಿ ಆಹ್ವಾನಿಸಲಾಗಿದೆ. ಈ ಯೋಜನೆಯಡಿ ಫಲಾಪೇಕ್ಷೆ ಪಡೆಯುವ ಅರ್ಹ ವಿಶೇಷಚೇತನರು ತಮ್ಮ ಗ್ರಾಮ ಪಂಚಾಯಿತಿಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ಗ್ರಾಮೀಣ ಪುನರ್ವಸತಿ ಕಾರ್ಯಕರ್ತರನ್ನು ಹಾಗೂ ತಾಲೂಕು ಮಟ್ಟದಲ್ಲಿ ಕೆಲಸ ನಿರ್ವಹಿಸುತ್ತಿರುವ ವಿವಿದೋದ್ದೇಶ ಪುನರ್ವಸತಿ ಕಾರ್ಯಕರ್ತರಾದ ಮಡಿಕೇರಿ ತಾಲೂಕಿನ ರಾಜೇಶ್ವರ ಅವರ ಮೊ. 8073192914, ಸೋಮವಾರಪೇಟೆ ತಾಲೂಕಿನ ಹರೀಶ್ ಟಿ.ಆರ್. ಮೊ. 9008685129 ಹಾಗೂ ವೀರಾಜಪೇಟೆ ತಾಲೂಕಿನ ಪ್ರಥನ್‍ಕುಮಾರ್ ಸಿ.ಬಿ. ಮೊ. 9900883654, ಜಿಲ್ಲಾ ವಿಶೇಷಚೇತನರ ಕಲ್ಯಾಣಾಧಿಕಾರಿಗಳ ಕಚೇರಿಯ ಮಾಹಿತಿ ಸಲಹೆಗಾರರಾದ ಹೆಚ್.ಎಸ್. ನವೀನ್ ಮೊ. 7411717619 ಹಾಗೂ ರವಿ ಇವರ ಮೊ. 9741813436 ನ್ನು ಹಾಗೂ ಕಚೇರಿ ದೂ. 08272-295829 ನ್ನು ಸಂಪರ್ಕಿಸಬಹುದು ಎಂದು ಜಿಲ್ಲಾ ವಿಶೇಷಚೇತನರ ಕಲ್ಯಾಣಾಧಿಕಾರಿ ಆರ್. ಸಂಪತ್‍ಕುಮಾರ್ ತಿಳಿಸಿದ್ದಾರೆ.