ಮಡಿಕೇರಿ, ಆ. 31: ಕೊಡಗು ಜಿಲ್ಲೆಯಲ್ಲಿ ಪ್ರಸಕ್ತ ವರ್ಷದ ಮುಂಗಾರು ಮಳೆಯ ಸಂದರ್ಭದಲ್ಲಿ ಉಂಟಾದ ಪರಿಸ್ಥಿತಿಗೆ ಸಂಬಂಧಿಸಿದಂತೆ ಜಿಲ್ಲೆಯ ಮೂರು ತಾಲೂಕು ಗಳನ್ನೂ ಅತಿವೃಷ್ಟಿಪೀಡಿತ ಪ್ರದೇಶ ಎಂದು ಜಿಲ್ಲಾಡಳಿತ ಪರಿಗಣಿಸಿದ್ದು, ಈ ಬಗ್ಗೆ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ.ಆಗಸ್ಟ್‍ನಲ್ಲಿ ಸುರಿದ ಧಾರಾಕಾರ ಮಳೆ - ಬಿರುಗಾಳಿಯ ಪರಿಸ್ಥಿತಿಯಿಂದಾಗಿ ಜಿಲ್ಲೆಯಾದ್ಯಂತ ವ್ಯಾಪಕ ಹಾನಿ ಸಂಭವಿಸಿದೆ. ಕೊಡಗು ಜಿಲ್ಲೆ ಸಂಪೂರ್ಣವಾಗಿ ಕೃಷಿ ಪ್ರಧಾನವಾಗಿದ್ದು, ಇಲ್ಲಿನ ಜನತೆ ಬಹುತೇಕ ಮಡಿಕೇರಿ, ಆ. 31: ಕೊಡಗು ಜಿಲ್ಲೆಯಲ್ಲಿ ಪ್ರಸಕ್ತ ವರ್ಷದ ಮುಂಗಾರು ಮಳೆಯ ಸಂದರ್ಭದಲ್ಲಿ ಉಂಟಾದ ಪರಿಸ್ಥಿತಿಗೆ ಸಂಬಂಧಿಸಿದಂತೆ ಜಿಲ್ಲೆಯ ಮೂರು ತಾಲೂಕು ಗಳನ್ನೂ ಅತಿವೃಷ್ಟಿಪೀಡಿತ ಪ್ರದೇಶ ಎಂದು ಜಿಲ್ಲಾಡಳಿತ ಪರಿಗಣಿಸಿದ್ದು, ಈ ಬಗ್ಗೆ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ.ಆಗಸ್ಟ್‍ನಲ್ಲಿ ಸುರಿದ ಧಾರಾಕಾರ ಮಳೆ - ಬಿರುಗಾಳಿಯ ಪರಿಸ್ಥಿತಿಯಿಂದಾಗಿ ಜಿಲ್ಲೆಯಾದ್ಯಂತ ವ್ಯಾಪಕ ಹಾನಿ ಸಂಭವಿಸಿದೆ. ಕೊಡಗು ಜಿಲ್ಲೆ ಸಂಪೂರ್ಣವಾಗಿ ಕೃಷಿ ಪ್ರಧಾನವಾಗಿದ್ದು, ಇಲ್ಲಿನ ಜನತೆ ಬಹುತೇಕ ಈ ನಿಟ್ಟಿನಲ್ಲಿ ರೈತರಿಗೆ - ಬೆಳೆಗಾರರಿಗೆ ಆಗಿರುವ ನಷ್ಟ - ಕಷ್ಟದ ಕುರಿತಾಗಿ ಜಿಲ್ಲಾಡಳಿತ ಸಂಬಂಧಿಸಿದ ವಿವಿಧ ಇಲಾಖೆ ಗಳ ಮೂಲಕ ರೈತರಿಂದ ಅರ್ಜಿಯನ್ನು ಸ್ವೀಕರಿಸುತ್ತಿದೆ. ತೋಟಗಾರಿಕೆ, ಕೃಷಿ, ಕಾಫಿ ಮಂಡಳಿ, ಸಂಬಾರ ಮಂಡಳಿ ಮೂಲಕ ನಿಗದಿತ ಕಚೇರಿಗಳಲ್ಲಿ ಬೆಳೆನಷ್ಟಕ್ಕೆ ಸಂಬಂಧಿಸಿದಂತೆ ರೈತರು ಅರ್ಜಿ ಸಲ್ಲಿಸಲು ಅವಕಾಶವಿದೆ. ಸೆಪ್ಟೆಂಬರ್ 10ರ ತನಕ ಬೆಳೆ ನಷ್ಟ ಕುರಿತಾದ ಅರ್ಜಿ ಸಲ್ಲಿಕೆಗೆ ಕಾಲಾವಕಾಶ ವಿರುವುದಾಗಿ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ತಿಳಿಸಿದ್ದಾರೆ. ಈ ನಡುವೆ ಕಳೆದ ಹಲವು ದಿನಗಳ ಹಿಂದೆ ಜಿಲ್ಲಾಡಳಿತ ಸರಕಾರಕ್ಕೆ ಈ ಕುರಿತಾಗಿ ಮಾಹಿತಿಯನ್ನು ನೀಡಿದ್ದು, ಜಿಲ್ಲೆಯ ಮೂರು ತಾಲೂಕುಗಳನ್ನೂ ಅತಿವೃಷ್ಟಿಪೀಡಿತ ಪ್ರದೇಶಗಳೆಂದು ಘೋಷಿಸು ವಂತೆ ಪ್ರಸ್ತಾವನೆಯನ್ನು ಸಲ್ಲಿಸಿರುವುದಾಗಿ ಜಿಲ್ಲಾಧಿಕಾರಿಗಳು ಮಾಹಿತಿ ನೀಡಿದ್ದಾರೆ. ಸರಕಾರದಿಂದ ಈ ಕುರಿತಾಗಿ ಅಂತಿಮ ನಿರ್ಧಾರ ಪ್ರಕಟವಾಗಬೇಕಿದೆ. ಈ ನಡುವೆ ಕೆಲವು ಗ್ರಾಮಗಳನ್ನು ಮಳೆಹಾನಿ ಪೀಡಿತ ಪ್ರದೇಶ ಎಂದು (ಮೊದಲ ಪುಟದಿಂದ) ಪರಿಗಣಿಸಲಾಗಿಲ್ಲ ಎಂಬ ಆರೋಪಗಳು ಅಲ್ಲಲ್ಲಿ ಕೇಳಿಬರುತ್ತಿವೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಜಿಲ್ಲಾಧಿಕಾರಿಗಳು, ಸಂಪೂರ್ಣವಾಗಿ ಎಲ್ಲಾ ತಾಲೂಕುಗಳನ್ನು ಜಿಲ್ಲಾಡಳಿತ ಅತಿವೃಷ್ಟಿಪೀಡಿತ ಪ್ರದೇಶ ಎಂದು ಪರಿಗಣಿಸಿ ಸರಕಾರಕ್ಕೆ ವರದಿ ನೀಡಿದೆ. ಸರಕಾರ ಇದರಂತೆ ಪರಿಗಣಿಸಿ ಪ್ರಕಟಣೆ ಹೊರಡಿಸಿದಲ್ಲಿ ರೈತರಿಗೆ ಅಗತ್ಯ ಪರಿಹಾರ ಪಡೆಯಲು ಸಮಸ್ಯೆಯಾಗದು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಈ ನಡುವೆ ರೈತರು ಪರಿಹಾರ ಕೋರಿ ಅರ್ಜಿ ಸಲ್ಲಿಸಲು ಪಹಣಿಪತ್ರ (ಆರ್.ಟಿ.ಸಿ.) ಸೂಕ್ತವಾಗಿ ಲಭ್ಯವಾಗುತ್ತಿಲ್ಲ ಎಂಬ ಅಸಮಾಧಾನವೂ ರೈತರಿಂದ ವ್ಯಕ್ತಗೊಂಡಿದೆ. ಈ ಕರಿತು ‘ಶಕ್ತಿ’ ಜಿಲ್ಲಾಧಿಕಾರಿಗಳ ಗಮನ ಸೆಳೆದಾಗ ಈ ಸಮಸ್ಯೆಯ ಬಗ್ಗೆ ಗಮನಕ್ಕೆ ಬಂದಿದ್ದು, ಇದನ್ನು ಸರಿಪಡಿಸಲು ಕ್ರಮ ಕೈಗೊಳ್ಳಲಾಗಿದೆ. ಒಂದು ವೇಳೆ ಮತ್ತೂ ಸಮಸ್ಯೆ ಎದುರಾದಲ್ಲಿ ಈ ಬಗ್ಗೆ ಚರ್ಚಿಸಿ ಮತ್ತೆ ಆರ್.ಟಿ.ಸಿ. ಕುರಿತಾಗಿ ನಿರ್ಧಾರ ಕೈಗೊಳ್ಳುವುದಾಗಿ ತಿಳಿಸಿದರು.

ತಾಲೂಕು ಕಚೇರಿ, ನಾಡಕಚೇರಿ, ಗ್ರಾಮಲೆಕ್ಕಿಗರ ಕಚೇರಿ ಸೇರಿದಂತೆ ನಿಗದಿತ ಸ್ಥಳಗಳಲ್ಲಿ ಸೆ.10ರ ತನಕವೂ ರೈತರು ಅರ್ಜಿ ಸಲ್ಲಿಸಬಹುದಾಗಿದೆ.

ಇದೀಗ ದಿನಂಪ್ರತಿ ವಿವಿಧ ಇಲಾಖೆಗಳಿಗೆ ಸಂಬಂಧಿಸಿದಂತೆ ರೈತರಿಂದ ನೂರಾರು ಅರ್ಜಿಗಳು ಸಲ್ಲಿಕೆಯಾಗುತ್ತಿವೆ. ಜಿಲ್ಲೆಯಲ್ಲಿ ಅತಿವೃಷ್ಟಿಗೆ ಸಂಬಂಧಿಸಿದಂತೆ ಪರಿಶೀಲನೆಗೆ ಸದ್ಯದಲ್ಲಿ ಕೇಂದ್ರದ ತಂಡವೂ ಆಗಮಿಸಲಿದ್ದು, ಇದಕ್ಕೂ ಸಿದ್ಧತೆ ನಡೆಸಲಾಗಿದೆ. ಕೇಂದ್ರ ತಂಡದ ಭೇಟಿಯ ನಿರ್ದಿಷ್ಟ ದಿನಾಂಕ ಇನ್ನೂ ಖಾತರಿಗೊಂಡಿಲ್ಲ ಎಂದು ಅನೀಸ್ ಕಣ್ಮಣಿ ಜಾಯ್ ಅವರು ತಿಳಿಸಿದರು.

ಕೊಡಗಿನ ಎಲ್ಲಾ ಭಾಗದ ಪ್ರದೇಶವನ್ನು ಸೇರಿಸಲಿ

ಕೊಡಗು ಜಿಲ್ಲೆಯಲ್ಲಿ ಈ ಬಾರಿ ಮಳೆ ಗಾಳಿಯಿಂದ ಬಹುತೇಕ ಎಲ್ಲಾ ತಾಲೂಕಿನಲ್ಲಿ ಕಾಫಿ ಮೆಣಸು ಭತ್ತ ಬೆಳೆ 50% ರಷ್ಟು ನಾಶವಾಗಿದೆ. ತೋಟದಲ್ಲಿದ್ದ ನೂರಾರು ಬೆಲೆ ಬಾಳುವ ಮರಗಳು ಬಿದ್ದು ರೈತರು ಬೆಳೆಗಾರು ಕಂಗಾಲಾಗಿದ್ದಾರೆ. ವಿಶೇಷವಾಗಿ ವೀರಾಜಪೇಟೆ ತಾಲೂಕಿನ ಅನೇಕ ರೈತರು ತಮ್ಮ ಬೆಳೆ ನಷ್ಟದಿಂದ ಆತಂಕದಿಂದಿದ್ದಾರೆ ಎಂದು ಕಾಂಗ್ರೆಸ್ ಪ್ರಮುಖ ಕದ್ದಣಿಯಂಡ ಹರೀಶ್ ಬೋಪಣ್ಣ ಹೇಳಿದ್ದಾರೆ. ಇದೀಗ ಕೆಲವು ಗ್ರಾಮಗಳನ್ನು ಮಾತ್ರ ಬೆಳೆ ನಷ್ಟ ಪಟ್ಟಿಗೆ ಸೇರಿಸಲಾಗಿದೆ ಎಂಬ ಗೊಂದಲವಿದ್ದು, ಕೊಡಗಿನ ಇತರ ಎಲ್ಲಾ ಗ್ರಾಮಗಳನ್ನು ಪಟ್ಟಿಗೆ ಸೇರಿಸಿ ರೈತರಿಗೆ ನೆರವಾಗುವಂತೆ ಅವರು ಒತ್ತಾಯಿಸಿದ್ದಾರೆ.