ಮಡಿಕೇರಿ, ಆ. 31: 2019-20ನೇ ಸಾಲಿನಲ್ಲಿ ಮಡಿಕೇರಿಯ ಕೊಡವ ವಿದ್ಯಾನಿಧಿಯ ಮೂಲಕ ವಿದ್ಯಾರ್ಥಿ ವೇತನ ಮಂಜೂರಾಗಿದ್ದು, ಇದನ್ನು ಕೋವಿಡ್ ಕಾರಣದಿಂದಾಗಿ ಪಡೆದುಕೊಳ್ಳಲು ಈತನಕ ಸಾಧ್ಯವಾಗದ ವಿದ್ಯಾರ್ಥಿಗಳು ಇದೀಗ ಇದನ್ನು ಪಡೆದುಕೊಳ್ಳಬಹುದಾಗಿದೆ.
ಇಂತಹ ವಿದ್ಯಾರ್ಥಿಗಳು ಮಾತ್ರ ಲಿಖಿತ ಅರ್ಜಿ ಸಲ್ಲಿಸಿ ಇದನ್ನು ಪಡದು ಕೊಳ್ಳಬಹುದು. ಹೆಚ್ಚಿನ ಮಾಹಿತಿಗೆ 9901868988 ಅಥವಾ 08272-220694 ದೂರವಾಣಿಯನ್ನು ಸಂಪರ್ಕಿಸಬಹುದು ಎಂದು ಕಾರ್ಯದರ್ಶಿ ಕಾವೇರಪ್ಪ ಅವರು ತಿಳಿಸಿದ್ದಾರೆ.