ಮಡಿಕೇರಿ, ಆ. 30: ಬಿಟ್ಟಂಗಾಲ, ಅಂಬಟ್ಟಿ, ಬಾಳುಗೋಡು ಗ್ರಾಮಗಳನ್ನು ಒಳಗೊಂಡ ಭಾರತೀಯ ಜನತಾ ಪಕ್ಷದ ಶಕ್ತಿ ಕೇಂದ್ರಕ್ಕೆ ಪಿ.ಆರ್ ದಾಮೋದರ್ ಹಾಗೂ ಚಂಗೆಚೀರ ರಾಜ ಸೋಮಯ್ಯ ಅವರನ್ನು ಆಯ್ಕೆ ಮಾಡಲಾಗಿದೆ.
ಆಯ್ಕೆ ಪ್ರಕ್ರಿಯೆಯಲ್ಲಿ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಅರುಣ್ ಭೀಮಯ್ಯ, ವೀರಾಜಪೇಟೆ ಮಂಡಲ ಅಧ್ಯಕ್ಷ ನೆಲ್ಲೀರ ಚಲನ್, ಕಾರ್ಯದರ್ಶಿ ಅಮ್ಮಣ್ಣಿಚಂಡ ರಂಜಿ, ಜಿ.ಪಂ ಸದಸ್ಯೆ ಭವ್ಯ ಸೇರಿದಂತೆ ಇನ್ನಿತರರು ಇದ್ದರು.