ಗೋಣಿಕೊಪ್ಪ ವರದಿ, ಆ. 30: ಹೈಸೊಡ್ಲೂರು ಗ್ರಾಮದ ನಿರಾಶ್ರಿತರಿಗೆ ಸವಲತ್ತು, ದಾಖಲೆ ನೀಡುವಂತೆ ಆಗ್ರಹಿಸಿ ಅನಿರ್ಧಿಷ್ಠಾವಧಿ ಅಹೋರಾತ್ರಿ ಧರಣಿ, ಉಪವಾಸ ಸತ್ಯಾಗ್ರಹವನ್ನು ಸೆಪ್ಟೆಂಬರ್ 5 ರಿಂದ ಹುದಿಕೇರಿ ಕಂದಾಯ ಕಚೇರಿ ಎದುರು ನಡೆಸಲಾಗುವುದು ಎಂದು ದಲಿತ ಸಂಘರ್ಷ ಸಮಿತಿ ವಿಭಾಗೀಯ ಸಂಚಾಲಕ ಕೃಷ್ಣಪ್ಪ ತಿಳಿಸಿದ್ದಾರೆ.

ಮಳೆಹಾನಿಗೆ ಸಂಬಂಧಿಸಿದ ಪರಿಹಾರ ಚೆಕ್, ಗುಡಿಸಲಿಗೆ ಬೇಕಾದ ಹೊದಿಕೆ ಇಂತಹವುಗಳನ್ನು ತಕ್ಷಣ ವಿತರಣೆ ಮಾಡಬೇಕು. ಅವರಿಗೆ ಗೋಣಿಕೊಪ್ಪ ವರದಿ, ಆ. 30: ಹೈಸೊಡ್ಲೂರು ಗ್ರಾಮದ ನಿರಾಶ್ರಿತರಿಗೆ ಸವಲತ್ತು, ದಾಖಲೆ ನೀಡುವಂತೆ ಆಗ್ರಹಿಸಿ ಅನಿರ್ಧಿಷ್ಠಾವಧಿ ಅಹೋರಾತ್ರಿ ಧರಣಿ, ಉಪವಾಸ ಸತ್ಯಾಗ್ರಹವನ್ನು ಸೆಪ್ಟೆಂಬರ್ 5 ರಿಂದ ಹುದಿಕೇರಿ ಕಂದಾಯ ಕಚೇರಿ ಎದುರು ನಡೆಸಲಾಗುವುದು ಎಂದು ದಲಿತ ಸಂಘರ್ಷ ಸಮಿತಿ ವಿಭಾಗೀಯ ಸಂಚಾಲಕ ಕೃಷ್ಣಪ್ಪ ತಿಳಿಸಿದ್ದಾರೆ.

ಮಳೆಹಾನಿಗೆ ಸಂಬಂಧಿಸಿದ ಪರಿಹಾರ ಚೆಕ್, ಗುಡಿಸಲಿಗೆ ಬೇಕಾದ ಹೊದಿಕೆ ಇಂತಹವುಗಳನ್ನು ತಕ್ಷಣ ವಿತರಣೆ ಮಾಡಬೇಕು. ಅವರಿಗೆ ಪರಿಹಾರ ವಿತರಿಸಬೇಕು ಎಂದು ಆಗ್ರಹಿಸಲಾಗುವುದು ಎಂದರು.

ಜಿಲ್ಲಾ ಸಂಚಾಲಕ ಪರಶುರಾಮ್ ಮಾತನಾಡಿ, ಅಧಿಕಾರಿಗಳು ಅನವಶ್ಯಕವಾಗಿ ಅಲ್ಲಿನ ನಿವಾಸಿಗಳನ್ನು ಅಲೆದಾಡುವಂತೆ ಮಾಡುತ್ತಿದ್ದಾರೆ. ದಾಖಲೆಗಳಿಗೆ ಹೋಬಳಿ, ತಾಲೂಕು, ಜಿಲ್ಲಾ ಕಚೇರಿಗಳಿಗೆ ಸುತ್ತಾಡುವುದೇ ಆಗಿದೆ. ಆರ್ಥಿಕವಾಗಿ ಹಿಂದುಳಿದವರಿಗೆ ಇದು ತೊಂದರೆಯಾಗಿದೆ. ತಕ್ಷಣ ಅಗತ್ಯ ದಾಖಲಾತಿ, ಪರಿಹಾರ ವಿತರಿಸಬೇಕು ಎಂದು ಒತ್ತಾಯಿಸಲಾಗುವುದು ಎಂದು ತಿಳಿಸಿದರು.

ಗೋಷ್ಠಿಯಲ್ಲಿ ತಾಲೂಕು ಸಂಘಟನಾ ಸಂಚಾಲಕ ಗಣೇಶ್, ಗ್ರಾಮ ಸಂಚಾಲಕ ಚಂದ್ರ, ಮಣಿ ಇದ್ದರು.