ಮುಳ್ಳೂರು, ಆ. 29: ಆರ್.ಟಿ.ಇ. ಮರುಪಾವತಿ, ವಿದ್ಯಾಗಮದ ಅನುಷ್ಠಾನ, ಶಾಲಾ ಶುಲ್ಕ ಸಂಗ್ರಹಣೆ, ವಿದ್ಯಾರ್ಥಿಗಳ ನಿರಂತರ ಕಲಿಕೆ ಇನ್ನು ಮುಂತಾದ ವಿಷಯಗಳಿಗೆ ಸಂಬಂಧಪಟ್ಟಂತೆ ಸೋಮವಾರಪೇಟೆ ತಾಲೂಕು ಅನುದಾನ ರಹಿತ ಖಾಸಗಿ ಶಿಕ್ಷಣ ಸಂಸ್ಥೆ ಆಡಳಿತ ಮಂಡಳಿಗಳ ಸಭೆ ತಾ. 31 ರಂದು ಕುಶಾಲನಗರದ ಕೆ.ಎಂ.ಟಿ. ಶಾಲೆಯಲ್ಲಿ ಸಂಸ್ಥೆಯ ಸೋಮವಾರಪೇಟೆ ತಾಲೂಕು ಅಧ್ಯಕ್ಷ ದಾಮೋದರ್ ಅಧ್ಯಕ್ಷತೆಯಲ್ಲಿ ನಡೆಯಲಿದೆ ಎಂದು ಅನುದಾನ ರಹಿತ ಖಾಸಗಿ ಶಿಕ್ಷಣ ಸಂಸ್ಥೆಗಳ ತಾಲೂಕು ಕಾರ್ಯದರ್ಶಿ ಹಾಗೂ ಜಿಲ್ಲಾ ಪ್ರತಿನಿಧಿ ಡಿ. ಸುಜಲಾದೇವಿ ತಿಳಿಸಿದ್ದಾರೆ.