ನಾಪೋಕ್ಲು, ಆ. 29: ಸಮೀಪದ ಚೆಯ್ಯಂಡಾಣೆ ಗ್ರಾಮ ಪಂಚಾಯಿತಿಯ ನರಿಯಂದಡ ಗ್ರಾಮದಲ್ಲಿ ಇತಿಹಾಸ ಪ್ರಸಿದ್ಧ ಹೊಂದಿರುವ ಕಕ್ಕಡಮಕ್ಕಿ ಚಾಮುಂಡಿ ಬನದ ಮೇಲೆ ಬೃಹತ್ ಗಾತ್ರದ ಮರಬಿದ್ದು ಸಂಪೂರ್ಣವಾಗಿ ಹಾನಿಯಾಗಿದೆ. ಸ್ಥಳಕ್ಕೆ ಜಿಲ್ಲಾ ಪಂಚಾಯಿತಿ ಸದಸ್ಯ ಎನ್. ಕಿರಣ್ ಕಾರ್ಯಪ್ಪ ತೆರಳಿ ಸ್ಥಳ ವೀಕ್ಷಿಸಿ ಸೂಕ್ತ ಪರಿಹಾರ ವಿತರಿಸಲು ಕಂದಾಯ ಅಧಿಕಾರಿಗಳಿಗೆ ಸೂಚನೆ ನೀಡುವುದಾಗಿ ಭರವಸೆ ನೀಡಿದರು.