ಕೂಡಿಗೆ, ಆ. 29: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುದುಗೂರು ಗ್ರಾಮದಲ್ಲಿ ರೈತ ಸಂಘ ಸಮಿತಿ ರಚನೆ ಮಾಡಲಾಗಿದೆ.
ಸಮಿತಿ ಅಧ್ಯಕ್ಷರಾಗಿ ಟ.ಎಂ. ಚಿಣ್ಣಪ್ಪ, ಉಪಾಧ್ಯಕ್ಷರಾಗಿ ಟಿ.ಕೆ. ಕಾಳಪ್ಪ, ಕಾರ್ಯದರ್ಶಿಯಾಗಿ ಹೆಚ್.ಎಸ್. ರವಿ, ಖಜಾಂಚಿಯಾಗಿ ನಾಣಯ್ಯ ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ. ಈ ಸಂದರ್ಭ 20 ಜನ ರೈತರನ್ನು ಸಮಿತಿಯ ಸದಸ್ಯರಾಗಿ ಮತ್ತು ಗ್ರಾಮದ ಹಿರಿಯ 10 ಜನ ರೈತರನ್ನು ಸಲಹಾ ಸಮಿತಿಗೆ ಆಯ್ಕೆ ಮಾಡಲಾಗಿದೆ. ಸಭೆಯು ಹುದುಗೂರು ಗ್ರಾಮ ಯುವಕ ಸಂಘದ ಸಭಾಂಗಣದಲ್ಲಿ ನಡೆಯಿತು.