ಚೆಟ್ಟಳ್ಳಿ, ಆ. 29: ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಸಂಯೋಜಕರನ್ನಾಗಿ ಮಡಿಕೇರಿ ನಗರ ಸಭೆಯ ಮಾಜಿ ಅಧ್ಯಕ್ಷರು ಹಾಗೂ ಕೊಡಗು ಜಿಲ್ಲಾ ಕಾಂಗ್ರೆಸ್ ಖಜಾಂಚಿ ಹೆಚ್.ಎಂ. ನಂದಕುಮಾರ್ ಅವರನ್ನು ನೇಮಕ ಗೊಳಿಸಿ ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ. ಶಿವಕುಮಾರ್ ಅವರು ಆದೇಶ ಹೊರಡಿಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ವಿಧಾನ ಸಭಾ ಕ್ಷೇತ್ರದ ಕಡಬ ಬ್ಲಾಕ್ ಉಸ್ತುವಾರಿಯನ್ನು ನಂದಕುಮಾರ್ ಅವರಿಗೆ ವಹಿಸಲಾಗಿದೆ.