ಪಾಲಿಬೆಟ್ಟ: ಪಾಲಿಬೆಟ್ಟದ ಗಣಪತಿ ಸೇವಾ ಮಿತ್ರ ಮಂಡಳಿಯಿಂದ ಸರಳ ರೀತಿಯಲ್ಲಿ ದೇವಸ್ಥಾನದ ಕೊಳದಲ್ಲಿ ಗೌರಿ-ಗಣೇಶ ಮೂರ್ತಿಯನ್ನು ವಿಸರ್ಜಿಸಲಾಯಿತು. ಈ ಸಂದರ್ಭ ಗಣಪತಿ ಸೇವಾ ಮಿತ್ರ ಮಂಡಳಿಯ ಅಧ್ಯಕ್ಷ ಅಜಿತ್ ಕರುಂಬಯ್ಯ ಮಾತನಾಡಿ, ಈ ನಾಡಿಗೆ ಉತ್ತಮ ಬೆಳೆ, ಎಲ್ಲರಿಗೂ ಆರೋಗ್ಯ, ಕೆಲಸ-ಕಾರ್ಯಗಳು ಶ್ರೀ ವಿಘ್ನೇಶ್ವರನು ಕರುಣಿಸಲಿ ಎಂದರು. ಈ ಸಂದರ್ಭ ಜಿಲ್ಲಾ ಪಂಚಾಯಿತಿ ಸದಸ್ಯ ವಿಜು ಸುಬ್ರಮಣಿ, ಕುಟ್ಟಂಡ ವಸಂತ್, ದೀಪಕ್ ಗಣಪತಿ, ಮಾಳೇಟಿರ ಪವಿತ್ರ, ಟಿ.ಜಿ. ವಿಜೇಶ್, ಕುಪ್ಪಂಡ ಚಿಣ್ಣಪ್ಪ ಮುಂತಾದವರು ಇದ್ದರು. ರಾಧಾಕೃಷ್ಣ ಭಟ್ ಹಾಗೂ ಯೋಗೇಶ್ ಭಟ್ ಅವರು ಪೂಜೆಯನ್ನು ನೆರವೇರಿಸಿದರು.ಗುಡ್ಡೆಹೊಸೂರು: ಇಲ್ಲಿನ ಸಮುದಾಯಭವನದಲ್ಲಿ ಪ್ರತಿಷ್ಠಾಪಿಸಿದ್ದ 26ನೇ ವರ್ಷದ ಗಣೇಶ ಮೂರ್ತಿಯ ವಿಸರ್ಜನೆಯನ್ನು ಸರಳವಾಗಿ ನೆರವೇರಿಸಲಾಯಿತು.