ಕೊರೊನಾ ಬಂದಿದೆಯೋ ಇಲ್ಲವೋ..., ಎಂದು ಏನು ಅರ್ಥ ಆಗುವುದಿಲ್ಲ. ಆದರೂ ನಾವು ಧೈರ್ಯವಾಗಿರಬೇಕೆಂದು ಮಡಿಕೇರಿಯ ಪ್ರಸನ್ನ ಅವರು ಹೇಳುತ್ತಾರೆ. ನನ್ನ ಪತ್ನಿ, ಮಗನಿಗೆ ಜ್ವರ ಬಂದಿತ್ತು. ಅದು ಔಷಧಿಯಿಂದ ವಾಸಿಯಾಯಿತು. ನಂತರ ನನಗೆ ಜ್ವರ ಬಂತು, ಮಳೆಗಾಲದಲ್ಲಿ ಶೀಥ-ಜ್ವರ ಮಾಮೂಲಿ ಎಂದುಕೊಂಡು ಸುಮ್ಮನಿದ್ದೆ. ಆದರೂ ವೈದ್ಯ ವೃತ್ತಿಯಲ್ಲಿರುವ ಬಂಧುಗಳು ಒಮ್ಮೆ ರಕ್ತ ಪರೀಕ್ಷೆ ಮಾಡಿಸಿಕೊಳ್ಳಲು ಸಲಹೆ ನೀಡಿದ್ದರಿಂದ ಲ್ಯಾಬ್‍ಗೆ ಹೋದಾಗ ಅಲ್ಲಿ ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳುವಂತೆ ಸಲಹೆ ಮಾಡಿದರು. ಪರೀಕ್ಷೆ ಮಾಡಿದಾಗ ಪಾಸಿಟಿವ್ ಬಂತು. ನಾಲ್ಕು ದಿವಸಗಳ ಕಾಲ ಆಸ್ಪತ್ರೆಯಲ್ಲಿದ್ದೆ. ವಿಟಮಿನ್ ಸಿ ಸೇರಿದಂತೆ ಮಾತ್ರೆಗಳನ್ನು ಕೊಡುತ್ತಿದ್ದರು. ನಂತರ ಮನೆಯಲ್ಲಿಯೇ ಹೋಂಕ್ವಾರಂಟೈನ್ ಮಾಡಲಾಯಿತು. ಈಗ ಚೆನ್ನಾಗಿದ್ದೇನೆ. ಊಟ ಎಲ್ಲವೂ ಸರಿಯಾಗಿಯೇ ಸೇರುತ್ತದೆ ಎಂದು ಹೇಳುತ್ತಾರೆ. ಕೊರೊನಾದ ಯಾವುದೇ ಲಕ್ಷಣಗಳು ಇರಲಿಲ್ಲ. ಆದರೂ ಇದೊಂದು ದೊಡ್ಡ ಅನುಭವ. ಕ್ವಾರಂಟೈನ್, ಸೀಲ್‍ಡೌನ್ ಇದರಿಂದಾಗಿ ಮನಸಿಗೆ ನೆಮ್ಮದಿ ಇಲ್ಲದಂತಾಗುತ್ತದೆ. ಆದರೂ ಧೈರ್ಯದಿಂದ ಇದ್ದರೆ ಸಾಕು. ಆಸ್ಪತ್ರೆಯಲ್ಲಿ ವೈದ್ಯರು ಹಾಗೂ ದಾದಿಯರ ಸೇವೆ ಮೆಚ್ಚಲೇಬೇಕೆಂದು ಪ್ರಸನ್ನ ಹೇಳುತ್ತಾರೆ.