ನಾಪೋಕ್ಲು, ಆ. 28: ಮಂಗಳವಾರ ಬೆಂಗಳೂರಿನಿಂದ ಭಾಗಮಂಡಲಕ್ಕೆ ಕೆಎಸ್ಆರ್ಟಿಸಿ ಬಸ್ ಆಗಮಿಸಿದ್ದು ಸಂಜೆ ಬೇತು ಗ್ರಾಮಸ್ಥರು ಬಸ್ ಚಾಲಕ ಹಾಗೂ ನಿರ್ವಾಹಕರಿಗೆ ಹೂವಿನ ಹಾರ ಹಾಕಿ ಸ್ವಾಗತಿಸಿದರು.
ಎರಡು ಬಸ್ಗಳು ಬೆಂಗಳೂರು-ಭಾಗಮಂಡಲ ಹಾಗೂ ಭಾಗಮಂಡಲ-ಬೆಂಗಳೂರು ನಡುವೆ ಸಂಚಾರ ಪ್ರಾರಂಭಿಸಿದ್ದು, ಜನರಿಗೆ ಅನುಕೂಲವಾಗಲಿದೆ ಎಂದು ಗ್ರಾಮಸ್ಥರು ಅಭಿಪ್ರಾಯಪಟ್ಟರು. ನಾಪೆÇೀಕ್ಲು ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಕಾಲೇಯಂಡ ಸಾಬ ತಿಮ್ಮಯ್ಯ ನಿರ್ವಾಹಕ ಮತ್ತು ಚಾಲಕನಿಗೆ ಪುಪ್ಪಗುಚ್ಚ ನೀಡಿ ಬರಮಾಡಿಕೊಂಡರು. ಮಾಜಿ ಗ್ರಾಮ ಪಂಚಾಯಿತಿ ಸದಸ್ಯ ಚೋಕಿರ ರೋಶನ್, ಬೊಳ್ಯಪಂಡ ಹರೀಶ್, ಚೋಕಿರ ಸಜಿತ್, ಕಲ್ಯಾಟಂಡ ಸುಮಿತ್ರ, ಬೊಳ್ಯಪಂಡ ಮಮತ, ಶೈಲಾ, ಎಳ್ತಂಡ ಭೀಮಯ್ಯ, ಕುಟ್ಟಂಚೆಟ್ಟೀರ ಶ್ಯಾಮ್ ಮತ್ತಿತರರು ಇದ್ದರು.