ಕೊಡಗಿನ ದಕ್ಷಿಣ ಭಾಗದ ಪ್ರಶಾಂತ ವಾತಾವರÀಣದ ನಡುವೆ, ಪೊನ್ನಂಪೇಟೆ ಹಳ್ಳಿಗಟ್ಟುವಿನಲ್ಲಿ ತಲೆಯೆತ್ತಿ ನಿಂತಿರುವ ವಿದ್ಯಾಸಂಸ್ಥೆ “ಕೂರ್ಗ್ ಇನ್ಸಿಟಿಟ್ಯೂಟ್ ಆಫ್ ಟೆಕ್ನಾಲಜಿ” 1999ರಲ್ಲಿ ಸ್ಥಾಪನೆಯಾಯಿತು. ದಕ್ಷಿಣ ಕೊಡಗಿನ ಹಲವು ವಿದ್ಯಾಸಂಸ್ಥೆಗÀಳ ಸ್ಥಾಪನಾ ಅಧ್ಯಕ್ಷ, ಕೊಡುಗೈದಾನಿ, ವಿದ್ಯಾದಾತ ದಿವಂಗತ ಡಾ|| ಮುಕ್ಕಾಟಿರ ಎಂ ಚೆಂಗಪ್ಪ ಎಂಬ ಮಹಾನ್ ಚೇತನರ ದೂರ ದೃಷ್ಟಿಯಿಂದ ಸ್ಥಾಪಿತವಾದ “ಕೊಡವ ಎಜುಕೇಷನ್ ಸೊಸೈಟಿ”ಯ ಆಶ್ರಯದಲ್ಲಿ “ಕೂರ್ಗ್ ಇನ್ಸಿಟಿಟ್ಯೂಟ್ ಆಫ್ ಟೆಕ್ನಾಲಜಿ” ಕಾಲೇಜು ಪ್ರಾರಂಭಗೊಂಡಿತು. ಕೊಡಗಿನ ವಿದ್ಯಾರ್ಥಿಗಳ ಹಾಗೂ ಹೊರ ಜಿಲ್ಲೆಯ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳ ಮಹತ್ವಾಕಾಂಕ್ಷೆಯನ್ನು ನೆರವೇರಿಸುವಲ್ಲಿ ಕಾರ್ಯನಿರತವಾಗಿದೆ. ಈ ಸಂಸ್ಥೆಯನ್ನು ಆರಂಭಿಸಿದ ಉದ್ದೇಶವೆನೆಂದರೆ, ಈ ಹಿಂದೆ ಕೊಡಗಿನ ಪ್ರತಿಭಾವಂತ ವಿದ್ಯಾರ್ಥಿಗÀಳು ಇಂಜಿನೀಯರಿಂಗ್ ಪದವಿ ಪಡೆಯಲು ನಗರ ಪ್ರದೇಶವನ್ನು ಅವಲಂಬಿಸಬೇಕಾದುದ್ದು ಅನಿವಾರ್ಯವಾಗಿತ್ತು. ಕೊಡಗಿನ ಗ್ರಾಮೀಣ ಪ್ರದೇಶದ ಎಲ್ಲಾ ವರ್ಗದ ವಿದ್ಯಾರ್ಥಿಗಳಿಗೆ ತಾಂತ್ರಿಕ ಶಿಕ್ಷಣ ದೊರÀಕುವುದು ಕಷ್ಟ ಸಾಧ್ಯವಾಗಿತ್ತು. ಅದರಲ್ಲಿಯೂ ಆರ್ಥಿಕವಾಗಿ ಹಿಂದುಳಿದ ಪ್ರತಿಭಾವಂತ ವಿದ್ಯಾರ್ಥಿಗಳ ಪಾಲಿಗೆ ಗಗನ ಕುಸುಮವಾಗಿ ಪರಿಣಮಿಸಿತ್ತು. ಈ ಎಲ್ಲಾ ಅಂಶವನ್ನು ಮನಗಂಡ ಕೊಡವ ಎಜುಕೇಷನ್ ಸೊಸೈಟಿಯು, ಒಂದು ಮಹತ್ವದ ಸಂಕಲ್ಪವನ್ನು ಮಾಡಿತು. ಅದರ ಫಲವಾಗಿ 1999ರಲ್ಲಿ ಕೊಡಗಿನಲ್ಲಿಯೇ ಪ್ರಪ್ರಥಮ ಬಾರಿಗೆ ಖಾಸಗಿ ತಾಂತ್ರಿಕ ವಿದ್ಯಾಲಯ “ಕೂರ್ಗ್ ಇನ್ಸಿಟಿಟ್ಯೂಟ್ ಆಫ್ ಟೆಕ್ನಾಲಜಿ” ಕಾಲೇಜು ಹ¯ವು ದಾನಿಗಳ ಕೊಡುಗೆಯೊಂದಿಗೆ ಸ್ಥಾಪನೆಯಾಯಿತು. ಈ ಮೂಲಕ ವಿದ್ಯಾರ್ಥಿಗಳ ಉಜ್ವಲ ಭವಿಷ್ಯಕ್ಕೆ ಭದ್ರ ಬುನಾದಿಯನ್ನು ಕಲ್ಪಿಸಿಕೊಟ್ಟಿತು.

“ಪ್ರಗತಿಯ ಆಧಾರ ಸ್ಥಂಭವೇ ತಂತ್ರಜ್ಞಾನ: ಜಗತ್ತು ತಾಂತ್ರಿಕತೆಯಿಂದಾಗಿ ಶರವೇಗದಲ್ಲಿ ಅಭಿವೃದ್ಧಿಯ ಪಥದತ್ತ ಸಾಗುತ್ತಿದೆ. ತಂತ್ರಜ್ಞಾನದ ಅಸ್ತಿತ್ವವಿಲ್ಲದೇ ಜೀವನವನ್ನು ಕಲ್ಪಿಸಿಕೊಳ್ಳುವುದು ಅಸಾಧ್ಯ ಎನ್ನುವ ಮಟ್ಟ್ಟಿಗೆ ನಮ್ಮ ಬದುಕಿನ ಅವಿಭಾಜ್ಯ ಅಂಗವಾಗಿದೆ. ಈ ನಿಟ್ಟಿನಲ್ಲಿ ನಮ್ಮ ಸಂಸ್ಥೆಯ ಉದ್ದೇಶ, ನೂತನ ತಂತ್ರಜ್ಞಾನದ ಅವಿಷ್ಕಾರ ಹಾಗೂ ಸಂಶೋಧನೆಯ ಮೂಲಕ ದೇಶದ ಪ್ರಗತಿಗೆ ಸಂಸ್ಥೆಯ ವಿದ್ಯಾರ್ಥಿಗಳು ಕೊಡುಗೆ ನೀಡುವ ಹಂತಕ್ಕೆ ಅವರಿಗೆ ವಿದ್ಯಾರ್ಜನೆ ನೀಡಿ ಸಜ್ಜುಗೊಳಿಸುವುದು. ಈ ದಿಸೆಯಲ್ಲಿ ಸಿಐಟಿ (ಕೂರ್ಗ್ ಇನ್ಸಿಟಿಟ್ಯೂಟ್ ಆಫ್ ಟೆಕ್ನಾಲಜಿ) ವಿದ್ಯಾ ಸಂಸ್ಥೆಯು 21ವರ್ಷವನ್ನು ಪೂರ್ಣಗೊಳಿಸಿ ಯಶಸ್ವಿಯಾಗಿ ಮುನ್ನಡೆಯುತ್ತಿದೆ.

ನುರಿತ, ಅನುಭವಿ ಪ್ರಾಧ್ಯಾಪಕ ವೃಂದ ಹಾಗೂ ಬೋಧಕೇತರ ವೃಂದ. ಸುಂದರ ಪರಿಸರದ ಮದ್ಯೆ 34 ಎಕರೆ ಪ್ರದೇಶದಲ್ಲಿ ವಿಶಾಲ ಹಾಗೂ ಭವ್ಯ ಮತ್ತು ಸುಸಜ್ಜಿತ ಕಟ್ಟಡ, ಆಧುನಿಕ ತಂತ್ರಜ್ಞಾನದ ಅಳವಡಿಕೆ. ಉನ್ನತ ಮಟ್ಟದ, ಎಲ್ಲಾ ಸವಲತ್ತುಗಳನೊಳಗೊಂಡ ಪ್ರಯೋಗಾಲಯಗಳು. 20 ಸಾವಿರಕ್ಕೂ ಹೆಚ್ಚು ಪುಸ್ತಕ ಭಂಡಾರ ಹೊಂದಿರುವ ಗ್ರಂಥಾಲಯವನ್ನು ಸಂಸ್ಥೆ ಹೊಂದಿದೆ. ನಾಲ್ಕು ಪ್ರಮುಖ ತಾಂತ್ರಿಕ ವಿಭಾಗವನ್ನು ಹೊಂದಿದೆ ಅವುಗಳು ಈ ಕೆಳಗಿನಂತಿವೆ. 1. ಎಲೆÉಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ ಇಂಜಿನಿಯರಿಂಗ್ 2. ಕಂಪ್ಯೂಟರ್ ಸೈನ್ಸ್ ಮತ್ತು ಇಂಜಿನಿಯರಿಂಗ್ 3. ಮೆಕಾನಿಕಲ್ ಇಂಜಿನಿಯರಿಂಗ್ 4. ಸಿವಿಲ್ ಇಂಜಿನಿಯರಿಂಗ್.

ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರಿಗೆ ಪ್ರತ್ಯೇಕ ಸುಸಜ್ಜಿತ ಹಾಸ್ಟೇಲ್ ವ್ಯವಸ್ಥೆ ಹೊಂದಿರುವುದರ ಜೊತೆಗೆ Wi-ಈi ಸೌಲಭ್ಯವನ್ನು ಒಳಗೊಂಡಿದೆ.

ಕೊಡಗಿನ ವಿವಿಧ ಕಡೆಗಳಿಗೆ ಕಾಲೇಜು ಬಸ್ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ವಿಶಾಲವಾದ ಆಟದ ಮೈದಾನವನ್ನು ಹೊಂದಿದ್ದು, ಕ್ರೀಡೆಗೆ ಪ್ರಾಶÀಸ್ತ್ಯವನ್ನು ನೀಡಲಾಗುತ್ತಿದೆ. ಒಳಾಂಗಣ, ಹೊರಾಂಗಣ ಕ್ರೀಡೆಗೆ ಪ್ರತ್ಯೇಕವಾದ ವ್ಯªಸ್ಥೆಯನ್ನು ಕಲ್ಪಿಸಲಾಗಿದೆ.

ವಿದ್ಯಾರ್ಥಿಗÀಳ ಸರ್ವೊತ್ತಮ ಬೆಳವಣಿಗೆ ಅವಶ್ಯವಾಗಿರುವ ಎನ್.ಎಸ್.ಎಸ್, ರೆಡ್‍ಕ್ರಾಸ್ ಇಕೋಕ್ಲಬ್‍ಗಳನ್ನು ಒಳಗೊಂಡಿದೆ. ಉತ್ತಮ Pಟಚಿಛಿemeಟಿಣ ವ್ಯವಸ್ಥೆಯನ್ನು ಹೊಂದಿದೆ, ಪ್ರತಿವರ್ಷ ಪ್ರತಿಷ್ಠಿತ ಹಲವಾರು ಬಹುರಾಷ್ಟ್ರೀಯ ಕಂಪನಿಗಳು ಉದ್ಯೋಗ ಮೇಳವನ್ನು ನಡೆಸಿ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ ಆ ಮೂಲಕ ಶಿಕ್ಷಣದ ಜೋತೆಗೆ ಉದ್ಯೋಗಾವಕಾಶವನ್ನು ಕಲ್ಪಿಸಿಕೊಡಲಾಗುತ್ತಿದೆ. ಉದಾ:- ಃಔSಅ, IಓಈಔSIS, ಐ&ಖಿ eಣಛಿ., I.ಂ.S, I.P.S ಹಾಗೂ ಏ.ಂ.S ಆಫೀಸರ್ಸ್ ನಂತಹ ಉನ್ನತ ಹುದ್ದೆಯನ್ನು ನಮ್ಮ ಸಂಸ್ಥೆಯಲ್ಲಿ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳು ಅಲಂಕರಿಸಿರುವುದು ಸಿ.ಐ.ಟಿ. ಕಾಲೇಜಿಗೆ ಹೆಮ್ಮೆಯ ವಿಚಾರವಾಗಿದೆ. ಜೊತೆಗೆ ದೇಶದ ರಕ್ಷಣದಳವಾದ ವಾಯುಪಡೆ, ನೌಕಪಡೆ, ಭೂಸೇನೆಗಳಲ್ಲಿ ಸಂಸ್ಥೆಯ ವಿದ್ಯಾರ್ಥಿಗಳು ಸೇವೆ sಸÀಲ್ಲಿಸುತ್ತಿದ್ದಾರೆ. ಕೊಡಗಿನಲ್ಲಿ ಸಂಭವಿಸಿದ ಪ್ರಾಕೃತಿಕ ವಿಕೋಪದಿಂದಾಗಿ ಅಪಾರ ಪ್ರಮಾಣದ ಆಸ್ತಿ-ಪಾಸ್ತಿ ನಷ್ಟವಾಯಿತು.

ಕೊಡಗಿನ ಜನ ತೀವ್ರ ಸಂಕಷ್ಟ ಎದುರಿಸಬೇಕಾಯಿತು. ಈ ಸÀಂದರ್ಭದಲ್ಲಿ ಕೊಡವ ಎಜುಕೇಷನ್ ಸೊಸೈಟಿಯು ತಾಂತ್ರಿಕ ಶಿಕ್ಷಣ ಪಡೆಯಬೇಕೆಂಬ ಹಂಬಲ ಹೊಂದಿದ್ದ ಆರ್ಥಿಕವಾಗಿ ಸಂಕಷ್ಟಕ್ಕೆ ಗುರಿಯಾದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣವನ್ನು ನೀಡಿ ಮಾನವೀಯತೆಂiÀiನ್ನು ಮೆರೆದಿದೆ. ನಮ್ಮ ಸಂಸ್ಥೆಯ ವಿದ್ಯಾರ್ಥಿಗಳು ವಿವಿಧ ಸಂಸ್ಥೆಗಳು ನೀಡುವ ವಿದ್ಯಾರ್ಥಿ ವೇತನ ಸೌ¯ಭ್ಯವನ್ನು ಪಡೆದುಕೊಳ್ಳುತ್ತಿದ್ದಾರೆ. ನೃತ್ಯ, ಸಂಗೀತ, ರೂಪದರ್ಶಿ ಇನ್ನೂ ಮುಂತಾದ ಚಟುವಟಿಕೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಾರೆ. ಮುಖ್ಯವಾಗಿ ಕಾಲೇಜಿನ ಅನೇಕ ಪ್ರತಿಭಾವಂತಹ ವಿದ್ಯಾರ್ಥಿಗಳು ವಿ.ಟಿ.ಯು ರ್ಯಾಂಕ್ ಗಳಿಸಿರುವುದು ಕಾಲೇಜಿನ ಹಿರಿಮೆಯಾಗಿದೆ.

ಕೊಡವ ಎಜುಕೇಷನ್ ಸೊಸೈಟಿಯು, “ಕೂರ್ಗ್ ಇನ್ಸಿಟಿಟ್ಯೂಟ್ ಆಫ್ ಪಿಯು ಕಾಲೇಜನ್ನು ಆರಂಭಿಸಿದೆ. ತಾಂತ್ರಿಕ ಶಿಕ್ಷಣದ ಅಡಿಪಾಯವಾದ ವಿಜ್ಞಾನ ವಿಷಯವನ್ನು ಪ್ರಮುಖವಾಗಿ ಆಯ್ಕೆ ಮಾಡಿಕೊಂಡು ಉತ್ತಮ ಗುಣ ಮಟ್ಟದ ಶಿಕ್ಷಣವನ್ನು ನೀಡುತ್ತಿದೆ.

-ಸಿ. ಪಿ. ಬೆಳ್ಯಪ್ಪ, ಅಧ್ಯಕ್ಷರು, ಕೊಡವ ಎಜ್ಯುಕೇಶನ್ ಸೊಸೈಟಿ.