ಗೋಣಿಕೊಪ್ಪಲು: ಈ ಬಾರಿ ಸುರಿದ ಭಾರೀ ಮಳೆ-ಗಾಳಿಯಿಂದ ತೊಂದರೆಗೊಳಗಾಗಿ ತನ್ನ ಮನೆಯನ್ನು ಕಳೆದುಕೊಂಡಿದ್ದ ಬಿರುನಾಣಿ ಗ್ರಾಮದ ನೆಲ್ಲೀರ ರಂಜಿ ನಾಚಪ್ಪ ಅವರಿಗೆ ಕಾಂಗ್ರೆಸ್ ಮುಖಂಡ ಕದ್ದಣಿಯಂಡ ಹರೀಶ್ ಬೋಪಣ್ಣ ರೂ. 10 ಸಾವಿರ ಧನ ಸಹಾಯ ಮಾಡಿದ್ದಾರೆ. ಇವರ ಸಹಾಯಕ್ಕಾಗಿ ಬಿ. ಶೆಟ್ಟಿಗೇರಿ ಗ್ರಾಮದ ಕೊಲ್ಲೀರ ಬೋಪಣ್ಣ ಇದೇ ಸಂದರ್ಭ ರೂ. 5 ಸಾವಿರ ಹಣವನ್ನು ವಿತರಿಸಿದರು.

ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್‍ನ ಅಧ್ಯಕ್ಷ ಮೀದೇರಿರ ನವೀನ್ ಸಮ್ಮುಖದಲ್ಲಿ ಹಣ ವಿತರಿಸಲಾಯಿತು. ಈ ಸಂದರ್ಭ ಜಿಲ್ಲಾ ಪಂಚಾಯಿತಿ ಸದಸ್ಯರಾದ ಮುಕ್ಕಾಟಿರ ಶಿವು ಮಾದಪ್ಪ, ತಾಲೂಕು ಪಂಚಾಯಿತಿ ಸದಸ್ಯ ಪಲ್ವೀನ್ ಪೂಣಚ್ಚ, ಬಿರುನಾಣಿ ವಲಯ ಕಾಂಗ್ರೆಸ್ ಅಧ್ಯಕ್ಷ ಅಣ್ಣಾಳಮಾಡ ಲಾಲಾ ಅಪ್ಪಣ್ಣ, ಬಿ. ಶೆಟ್ಟಿಗೇರಿ ವಲಯ ಕಾಂಗ್ರೆಸ್ ಅಧ್ಯಕ್ಷ ತೀತರಮಾಡ ಸದಾ, ಸಂಜು, ಕಿಶೋರ್ ಉಪಸ್ಥಿತರಿದ್ದರು.ಮಡಿಕೇರಿ: ಇತ್ತೀಚೆಗೆ ಸುರಿದ ಭಾರೀ ಮಳೆಯಿಂದ ಸಂತ್ರಸ್ತರಾದ ಹಲವರಿಗೆ ಕಾಂಗ್ರೆಸ್ ಪ್ರಮುಖರಾದ ಕದ್ದಣಿಯಂಡ ಹರೀಶ್ ಬೋಪಣ್ಣ ಅವರು ನೆರವು ನೀಡಿದ್ದಾರೆ. ಪಾರಾಣೆಯ ಕೈಕಾಡು ಗ್ರಾಮದ ಪೇರಿಯಂಡ ಮೋಹನ್, ಅರೆಕಲ್ಲು ವಸಂತ ಅವರ ಮನೆ ಬಿದ್ದುಹೋಗಿದ್ದು ಕೈಕಾಡು ಶಾಲೆಯಲ್ಲಿ ವಾಸವಿದ್ದಾರೆ ಇವರಿಗೆ ತಲಾ 5,000ರೂಗಳನ್ನು ನೀಡಿರುತ್ತಾರೆ. ಎಮ್ಮೆಮಾಡು ಪಡಿಯಾನಿ, ಚೆರಿಯಪರಂಬು, ನಾಪೆÇೀಕ್ಲು ವ್ಯಾಪ್ತಿಯ ಹಲವು ಕಡೆ ಸುಮಾರು 15ಕ್ಕೂ ಹೆಚ್ಚು ಜನತೆಯ ಮನೆ ಹಾನಿಯಾಗಿದ್ದು ಹಲವರಿಗೆ ತಲಾ 5,000 ರೂಗಳಂತೆ 75 ಸಾವಿರಕ್ಕೂ ಅಧಿಕ ಹಣ ಪರಿಹಾರ ನೀಡಿ ಸಹಾಯ ಮಾಡಿರುತ್ತಾರೆ.

ಪರಿಹಾರ ನೀಡಿದ ಸಂದರ್ಭದಲ್ಲಿ ನಾಪೆÇೀಕ್ಲು ಬ್ಲಾಕ್ ಅಧ್ಯಕ್ಷರಾದ ಇಸ್ಮಾಯಿಲ್, ಡಿಸಿಸಿ ಉಪಾಧ್ಯಕ್ಷರಾದ ಕೊಟ್ಟಮುಡಿ ಹಂಸ, ಗ್ರಾಮ ಪಂಚಾಯಿತಿ ಸದಸ್ಯರಾದ ಕಾಳೆಯಂಡ ಸಾಬು, ಚೋಕಿರ ರೋಷನ್, ಹ್ಯಾರಿಶ್, ನಾಯಕಂಡ ಕುಂಞಣ್ಣ, ನಾಪೆÇೀಕ್ಲು ಪಂಚಾಯಿತಿ ಮಾಜಿ ಉಪಾಧ್ಯಕ್ಷ ತಿಮ್ಮಯ್ಯ, ರೋಷನ್, ಎಮ್ಮೆಮಾಡು ವಲಯ ಅಧ್ಯಕ್ಷ ಹಂಸ, ಮಾಜಿ ಗ್ರಾಮ ಪಂಚಾಯ್ತಿ ಸದಸ್ಯ ಹಂಸ ಬೊಳ್ಳಿಯಂಡ ಶರಿ ಗಿರೀಶ್, ಕದ್ದಣಿಯಂಡ ಗಿರೀಶ್, ಅಶ್ರಫ್ ಎಮ್ಮೆಮಾಡು, ಬೊಳ್ಳಿಯಪ್ಪಂಡ ಹರೀಶ್, ಮಚ್ಚೇಟಿರ ಕುಶಾಲಪ್ಪ, ಮಹಮ್ಮದ್, ಎಂ.ಪಿ ಕುಶಾಲಪ್ಪ (ಕಿಶು), ಸಿ.ಎ. ಇಬ್ರಾಹಿಂ ಸೇರಿದಂತೆ ಹಲವು ಕಾಂಗ್ರೆಸ್ ಮುಖಂಡರು ಭಾಗವಹಿಸಿದ್ದರು.