ಮಡಿಕೇರಿ, ಆ. 26 : ಜಿಲ್ಲೆಯಲ್ಲಿ ಹೊಸದಾಗಿ 10 ಕೊರೊನಾ ಪ್ರಕರಣಗಳು ವರದಿಯಾಗಿವೆ. ಇದುವರೆಗೆ 1250 ಪ್ರಕರಣಗಳು ವರದಿಯಾಗಿದ್ದು, 1020 ಮಂದಿ ಗುಣಮುಖರಾಗಿದ್ದಾರೆ. ಒಟ್ಟು 17 ಮಂದಿ ಸಾವನ್ನಪ್ಪಿದ್ದು, 213 ಪ್ರಕರಣಗಳು ಸಕ್ರಿಯವಾಗಿವೆ.

ಕೋವಿಡ್ ಆಸ್ಪತ್ರೆಯಲ್ಲಿ 58 ಮಂದಿ, ಕೋವಿಡ್ ಕೇರ್ ಸೆಂಟರ್‍ನಲ್ಲಿ ಮಂದಿ, ಹೋಮ್ ಐಸೋಲೇಶನ್‍ನಲ್ಲಿ 46 ಮಂದಿ ದಾಖಲಾಗಿದ್ದಾರೆ. ಜಿಲ್ಲೆಯಾದ್ಯಂತ 109 ನಿಯಂತ್ರಿತ ವಲಯಗಳಿವೆ.

ಹೊಸ ಪ್ರಕರಣಗಳ ವಿವರ

ಕುಶಾಲನಗರ ಬಸಪ್ಪ ಲೇಔಟಿನ 45 ವರ್ಷದ ಪುರುಷ, ಸೋಮವಾರಪೇಟೆ ನೀರುಗುಂದ ಗ್ರಾಮದ ಸರ್ಕಾರಿ ಶಾಲೆ ಬಳಿಯ 21 ವರ್ಷದ ಮಹಿಳೆ, ಮಡಿಕೇರಿ ಕನ್ನಂಡಬಾಣೆ ದೃಷ್ಟಿಗಣಪತಿ ದೇವಾಲಯ ಸಮೀಪದ 52 ವರ್ಷದ ಪುರುಷ, ಕೂಡಿಗೆ ಕೂಡ್ಲೂರು ನವಗ್ರಾಮ ಬಡಾವಣೆಯ 50 ವರ್ಷದ ಪುರುಷ, 16 ವರ್ಷದ ಬಾಲಕ ಮತ್ತು 45 ಮತ್ತು 20 ವರ್ಷದ ಮಹಿಳೆಯರು, ಹೆಬ್ಬಾಲೆ ಮರೂರಿನ ಬಸವೇಶ್ವರ ಆಂಜನೇಯ ದೇವಾಲಯ ಬಳಿಯ 45 ವರ್ಷದ ಪುರುಷ, ವೀರಾಜಪೇಟೆ ಸುಣ್ಣದ ಬೀದಿಯ 76 ವರ್ಷದ ಪುರುಷ, ಗೋಣಿಕೊಪ್ಪ ಪಟೇಲ್ ನಗರದ 27 ವರ್ಷದ ಪುರುಷನಿಗೆ ಸೋಂಕು ದೃಢಪಟ್ಟಿದೆ.