ಮಡಿಕೇರಿ, ಆ. 25 : ಜಿಲ್ಲೆಯಲ್ಲಿ ಹೊಸದಾಗಿ 19 ಕೊರೊನಾ ಪ್ರಕರಣಗಳು ವರದಿಯಾಗಿದೆ. ಇದುವರೆಗೆ 1239 ಕೊರೊನಾ ಪ್ರಕರಣಗಳು ವರದಿಯಾಗಿದ್ದು, 970 ಮಂದಿ ಗುಣಮುಖರಾಗಿದ್ದಾರೆ. ಒಟ್ಟು 16 ಮಂದಿ ಸಾವನ್ನಪ್ಪಿದ್ದು, 253 ಪ್ರಕರಣಗಳು ಸಕ್ರಿಯವಾಗಿದೆ. ಜಿಲ್ಲೆಯಾದ್ಯಂತ 257 ನಿಯಂತ್ರಿಯ ಪ್ರದೇಶಗಳಿವೆ. ಸೋಂಕಿತರ ಪೈಕಿ ಕೋವಿಡ್ ಆಸ್ಪತ್ರೆಯಲ್ಲಿ 71 ಮಂದಿ, ಕೋವಿಡ್ ಕೇರ್ ಸೆಂಟರ್‍ನಲ್ಲಿ 44 ಮಂದಿ ಹಾಗೂ ಹೋಂ ಐಸೋಲೇಶನ್‍ನಲ್ಲಿ 138 ಮಂದಿ ದಾಖಲಾಗಿದ್ದಾರೆ.

ಹೊಸ ಪ್ರಕರಣಗಳ ವಿವರ

ಕುಶಾಲನಗರ ಡ್ರೀಮ್ ಲೇಔಟಿನ ನಿಸರ್ಗಧಾಮ ಬಳಿಯ 30 ವರ್ಷದ ಪುರುಷ, ಶ್ರೀಮಂಗಲದ ಕೃಷ್ಣ ದೇವಾಲಯ ಬಳಿಯ 19 ಮತ್ತು 49 ವರ್ಷದ ಪುರುಷರು, ಶ್ರೀಮಂಗಲದ 76 ವರ್ಷದ ಮಹಿಳೆ, ಎಮ್ಮೆಮಾಡುವಿನ ಪಡಿಯಣಿ ಮಸೀದಿ ಬಳಿಯ 58 ವರ್ಷದ ಪುರುಷ, ಕುಶಾಲನಗರ ಸೋಮೇಶ್ವರ ಬಡಾವಣೆಯ 45, 24 ಮತ್ತು 25 ವರ್ಷದ ಮಹಿಳೆಯರು, ಕುಶಾಲನಗರ ಬಸಪ್ಪ ಲೇಔಟಿನ 8 ವರ್ಷದ ಬಾಲಕಿ, ಕುಶಾಲನಗರ ಮುಳ್ಳುಸೋಗೆಯ ಶಕ್ತಿ ಬಡಾವಣೆಯ 41 ವರ್ಷದ ಪುರುಷ, ಕುಶಾಲನಗರ ಮುಳ್ಳುಸೋಗೆಯ 1ನೇ ಬ್ಲಾಕಿನ 70 ವರ್ಷದ ಮಹಿಳೆ, ಕುಶಾಲನಗರ ನಿಜಾಮುದ್ದೀನ್ ಲೇಔಟಿನ 44 ವರ್ಷದ ಪುರುಷ, ವಿ.ಬಾಡಗದ 63 ವರ್ಷದ ಮಹಿಳೆ, ನೆಲ್ಲಿಹುದಿಕೇರಿ ಬದ್ರಿ ರಸ್ತೆಯ ನಲ್ವತ್ತೆಕ್ರೆಯ 36 ವರ್ಷದ ಪುರುಷ, ಸುಂಟಿಕೊಪ್ಪ ಅಂಬೇಡ್ಕರ್ ಬಡಾವಣೆಯ 18 ವರ್ಷದ ಮಹಿಳೆ, ಮಡಿಕೇರಿ ಸುದರ್ಶನ ವೃತ್ತದ ಕೆಇಬಿ ವಸತಿಗೃಹದ 17 ವರ್ಷದ ಬಾಲಕಿ, ವೀರಾಜಪೇಟೆ ಮಲ್ಲಮಟ್ಟಿ ಬಳಿಯ ಮೈತಾಡಿ ಅಂಚೆಯ ಚಾಮಿಯಾಲ ಗ್ರಾಮದ 70 ವರ್ಷದ ಪುರುಷ, ಹಾಸನ ಜಿಲ್ಲೆಯ ಮಲ್ಲೇನಹಳ್ಳಿಯ 45 ವರ್ಷದ ಮಹಿಳೆ, ಮಡಿಕೇರಿ ಕಾವೇರಿ ಲೇಔಟಿನ 54 ವರ್ಷದ ಮಹಿಳೆಗೆ ಸೋಂಕು ದೃಢಪಟ್ಟಿದೆ.