ವೀರಾಜಪೇಟೆ, ಆ. 25: ಕೂರ್ಗ್ ಮಾಕ್ಸ್ಮೆನ್ ವೀರಾಜಪೇಟೆ ಇದರ ವತಿಯಿಂದ ಪ್ರತಿ ವರ್ಷವು ನಡೆಸುತ್ತಾ ಬಂದಿದ್ದ ‘ಕೈಲ್ಪೊಳ್ದ್’ ಹಬ್ಬದ ಪ್ರಯುಕ್ತ ತೆಂಗಿನ ಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆಯನ್ನು ಈ ವರ್ಷ ಕೊರೊನಾ ಹಿನ್ನೆಲೆಯಲ್ಲಿ ಸರಕಾರದ ಆದೇಶದಂತೆ ಹಬ್ಬಗಳನ್ನು ಹೆಚ್ಚಿನ ಜನರು ಭಾಗವಹಿಸದಂತೆ ಆದೇಶಿಸಿರುವುದರಿಂದ ರದ್ದು ಪಡಿಸಲಾಗಿದೆಯೆಂದು ಕೂರ್ಗ್ ಮಾಕ್ಸ್ಮೆನ್ನ ಅಧ್ಯಕ್ಷ ಡಾ. ಎಂ.ಸಿ. ಕಾರ್ಯಪ್ಪ ತಿಳಿಸಿದ್ದಾರೆ.