ನಾಪೆÇೀಕ್ಲು, ಆ. 25: ಇತ್ತೀಚೆಗೆ ಸುರಿದ ಭಾರೀ ಮಳೆಯಿಂದಾಗಿ ನಾಪೆÇೀಕ್ಲು ವ್ಯಾಪ್ತಿಯಲ್ಲಿ ಪ್ರಕೃತಿ ವಿಕೋಪಕ್ಕೆ ಒಳಗಾಗಿ ಮನೆ ಕಳೆದುಕೊಂಡು ಸಂಕಷ್ಟಕ್ಕೆ ಒಳಗಾದ ಪ್ರದೇಶಗಳಿಗೆ ಕಾಂಗ್ರೆಸ್ ಮುಖಂಡ ಕದ್ದಣಿಯಂಡ ಹರೀಶ್ ಬೋಪಣ್ಣ ಭೇಟಿ ನೀಡಿ ಕುಟುಂಬಗಳಿಗೆ ಸಾಂತ್ವನ ಹೇಳಿ ತಲಾ 5 ಸಾವಿರ ರೂ. ಸಹಾಯಧನವನ್ನು ನೀಡಿದರು.
ಪಾರಾಣೆ ಕೊಣಂಜಗೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೈಕಾಡು ಗ್ರಾಮದ ಪೇರಿಯಂಡ ಮೋಹನ್, ಅರೆಕಲ್ಲು ವಸಂತ್, ಎಮ್ಮೆಮಾಡುವಿನ ಪಡಿಯಾಣಿ, ಚೆರಿಯಪರಂಬು, ನಾಪೆÇೀಕ್ಲು ವ್ಯಾಪ್ತಿಯ ಹಲವು ಕಡೆಗಳಲ್ಲಿ ಸುಮಾರು 15 ಕ್ಕೂ ಹೆಚ್ಚು ಜನರ ಮನೆ ಹಾನಿಯಾಗಿದ್ದು, ಅವರಿಗೆ ತಲಾ 5 ಸಾವಿರದಂತೆ ಪರಿಹಾರ ಹಣ ನೀಡಿದರು.
ಈ ಸಂದರ್ಭ ನಾಪೆÇೀಕ್ಲು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಎ. ಇಸ್ಮಾಯಿಲ್, ಕಾಂಗ್ರೆಸ್ ಡಿಸಿಸಿ ಉಪಾಧ್ಯಕ್ಷ ಕೊಟ್ಟಮುಡಿ ಹಂಸ, ನಾಪೆÇೀಕ್ಲು ವಲಯ ಕಾಂಗ್ರೆಸ್ ಅಧ್ಯಕ್ಷ ಮಾಚೆಟ್ಟಿರ ಕುಶು ಕುಶಾಲಪ್ಪ, ನಾಪೆÇೀಕ್ಲು ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಕಾಳೆಯಂಡ ಸಾಬಾ ತಿಮ್ಮಯ್ಯ, ಮುಖಂಡರಾದ ಚೋಕಿರ ರೋಶನ್, ನಾಯಕಂಡ ಮುತ್ತಪ್ಪ, ಹಂಸ, ಬೊಳ್ಳಂಡ ಶರಿ ಗಿರೀಶ್, ಕದ್ದಣಿಯಂಡ ಗಿರೀಶ್, ಬೊಳ್ಳೆಪಂಡ ಹರೀಶ್, ಚುಕ್ಕಂಡ ಉಂಬಾಯಿ ಮತ್ತಿತರರು ಇದ್ದರು.