ಕಡಂಗ, ಆ. 25: ಮಾಜಿ ಪ್ರಧಾನಿ ದಿ. ರಾಜೀವ್ ಗಾಂಧಿ ಹಾಗೂ ಮಾಜಿ ಮುಖ್ಯಮಂತ್ರಿ ದಿ. ದೇವರಾಜ್ ಅರಸ್ ಅವರ ಜಯಂತಿಯ ಪ್ರಯುಕ್ತ ಕೊಡಗು ಜಿಲ್ಲಾ ಯುವ ಕಾಂಗ್ರೆಸ್ ವತಿಯಿಂದ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು. ಈ ಸಂದರ್ಭ ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹನೀಫ್ ಎಸ್.ಪಿ. ನಾಪೆÇೀಕ್ಲು ಬ್ಲಾಕ್ ಯುವ ಅಧ್ಯಕ್ಷ ಸುದೈ ನಾಣಯ್ಯ, ಜಿಲ್ಲಾ ಯುವ ಪ್ರಧಾನ ಕಾರ್ಯದರ್ಶಿ ಶಾಫಿ ಕೊಟ್ಟಮುಡಿ, ಮಡಿಕೇರಿ ಬ್ಲಾಕ್ ಯುವ ಅಧ್ಯಕ್ಷ ರವಿ ನಾಪಂಡ, ಮಡಿಕೇರಿ ನಗರ ಯುವ ಅಧ್ಯಕ್ಷ ಸದಾ ಮುದ್ದಪ್ಪ, ವೀರಾಜಪೇಟೆ ವಿಧಾನಸಭಾ ಯುವ ಕಾರ್ಯದರ್ಶಿ ಸಿರಾಜ್ ಪರವಂಡ, ಸಾಮಾಜಿಕ ಜಾಲತಾಣ ಜಿಲ್ಲಾಧ್ಯಕ್ಷ ಸೂರಜ್ ಹೊಸೂರು, ರಾಹುಲ್ ಮಾರ್ಷಲ್, ಜಿಯೋ ಮಡಿಕೇರಿ, ಅನಿಲ್ ಯಾದವ್, ಮುದ್ದುರಾಜ್, ಡಿಸಿಸಿ ಸದಸ್ಯ ಬಾಲಚಂದ್ರ ನಾಯರ್ ಉಪಸ್ಥಿತರಿದ್ದರು.