ಸೋಮವಾರಪೇಟೆ, ಆ. 25: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸೋಮವಾರಪೇಟೆ ವಲಯದ ರೇಂಜರ್ ಬ್ಲಾಕ್ ನಿವಾಸಿ ಶಾಂತಮ್ಮ ಅವರಿಗೆ, ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರು ಮಂಜೂರು ಮಾಡಿರುವ ಮಾಸಿಕ ರೂ. 1000 ಮಾಸಾಶನದ ಪ್ರಥಮ ತಿಂಗಳ ಕಂತನ್ನು ವಲಯ ಮೇಲ್ವಿಚಾರಕ ರವಿಪ್ರಸಾದ್ ಆಲಾಜೆ ವಿತರಿಸಿದರು.

ಈ ಸಂದರ್ಭ ಮಾತನಾಡಿ, ಶ್ರೀ ಕ್ಷೇತ್ರದ ಯೋಜನೆಯ ವತಿಯಿಂದ ನಿರ್ಗತಿಕ ಕುಟುಂಬವನ್ನು ಗುರುತಿಸಿ ಮಾಸಿಕ ಮಾಸಾಶನವನ್ನು ನೀಡಲಾಗುತ್ತಿದೆ. ಇದರಿಂದಾಗಿ ಅನೇಕ ನಿರ್ಗತಿಕ ಕುಟುಂಬಗಳು ನೆಮ್ಮದಿಯ ಜೀವನ ನಡೆಸಲು ಸಾಧ್ಯವಾಗಿದೆ ಎಂದರು.

ರೇಂಜರ್ ಬ್ಲಾಕ್ ನಿವಾಸಿ ಶಾಂತಮ್ಮ ಅವರು ಒಬ್ಬಂಟಿಯಾಗಿದ್ದು ದುಡಿಯುವ ಶಕ್ತಿಯೂ ಇಲ್ಲದೇ ಅಕ್ಕಪಕ್ಕದ ಮನೆಯವರು ನೀಡುತ್ತಿದ್ದ ಆಹಾರವನ್ನು ಪಡೆದು ಬಾಡಿಗೆ ಮನೆಯಲ್ಲಿ ಜೀವನ ನಡೆಸುತ್ತಿದ್ದರು. ಇವರ ಅಸಹಾಯಕತೆಗೆ ಮರುಗಿದ ಧರ್ಮಸ್ಥಳದ ಧರ್ಮಾಧಿಕಾರಿ ಹೆಗ್ಗಡೆಯವರು ಪ್ರತಿ ತಿಂಗಳು 1,000 ಮಾಸಾಶನವನ್ನು ಮಂಜೂರು ಮಾಡಿದ್ದು ಮೊದಲ ತಿಂಗಳ ಕಂತನ್ನು ವಿತರಿಸಲಾಯಿತು.

ಈ ಸಂದರ್ಭ ನಗದು ಸಹಾಯಕ ಸೋಮು ಕುಮಾರ್, ಸೇವಾಪ್ರತಿನಿಧಿ ತಾರಾಲಕ್ಷ್ಮೀ ಅವರುಗಳು ವಿತರಿಸಿದರು.