‘ಕೊಡವ ಸಂಸ್ಕøತಿ ಪಡಿಪು’ ಕಾರ್ಯಕ್ರಮ

ಗೋಣಿಕೊಪ್ಪ ವರದಿ, ಆ. 25: ಭಾಷೆ ಸಂಸ್ಕøತಿಯ ಬಹುದೊಡ್ಡ ಮೂಲ ಎಂಬುದನ್ನು ಅರಿತುಕೊಂಡು ಯುವ ಪೀಳಿಗೆ ಭಾಷೆಗೆ ಆದ್ಯತೆ ನೀಡಬೇಕು ಎಂದು ತೂಕ್‍ಬೊಳಕ್ ಕಲೆ-ಕ್ರೀಡೆ ಸಾಂಸ್ಕøತಿಕ ವೇದಿಕೆ ಸಂಚಾಲಕ ಮುಲ್ಲೇಂಗಡ ಮಧೋಷ್ ಪೂವಯ್ಯ ಅಭಿಪ್ರಾಯಪಟ್ಟರು.

ಹಳ್ಳಿಗಟ್ಟು ಕೂರ್ಗ್ ಇನ್ಷ್ಟಿಟ್ಯೂಟ್ ಅಫ್ ಟೆಕ್ನಾಲಜಿ ಕಾಲೇಜಿನಲ್ಲಿ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ವತಿಯಿಂದ ಯುವ ಜನಾಂಗಕ್ಕೆ ಆಯೋಜಿಸಿದ್ದ ಕೊಡವ ಸಂಸ್ಕøತಿ ಪಡಿಪು ಆನ್‍ಲೈನ್ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿದರು. ಭಾಷೆ ನಾಶದಿಂದ ಸಂಸ್ಕøತಿ ನಾಶವಾಗುವುದನ್ನು ಅರಿತುಕೊಂಡು ಯುವ ಸಮೂಹ ಭಾಷಾ ಸಂರಕ್ಷಣೆಗೆ ಹೆಚ್ಚಿನ ಕಾಳಜಿ ವಹಿಸಬೇಕಿದೆ ಎಂದರು.

ಭಾಷೆ ಆಯಾ ಭಾಷಿತ ಜನಾಂಗದ ರಕ್ಷಣೆಯ ಭಾಗವಾಗಿದೆ. ಅದರ ರಕ್ಷಣೆಗೆ ಯುವ ಜನಾಂಗ ಮುಂದೆ ಬರಬೇಕಿದೆ ಎಂದರು. ಕೊಡಗಿನ ಹಬ್ಬಾಚರಣೆ, ಆಹಾರ ಪದ್ಧತಿ ತನ್ನದೇ ಆದ ವಿಶೇಷತೆ ಹೊಂದಿದೆ. ಇದು ಕೂಡ ಕೊಡವ ಸಂಸ್ಕøತಿಯ ಒಂದು ಭಾಗ ಎಂದು ಅರಿವು ಮೂಡಿಸಿದರು.

ಯುವ ಜನಾಂಗ ಪ್ರತಿಯೊಂದನ್ನು ಅರ್ಥೈಸಿಕೊಂಡು ಸಂಸ್ಕøತಿ ಉಳಿವಿಗೆ ಕೈಜೋಡಿಸಬೇಕಿದೆ ಎಂದರು. ಪಿಯು ಕಾಲೇಜಿನ ವಿದ್ಯಾರ್ಥಿಗಳು ಮನೆಯಲ್ಲಿಯೇ ಕುಳಿತು ಮಾಹಿತಿ ಪಡೆದುಕೊಂಡರು.

ಈ ಸಂದರ್ಭ ಕೊಡವ ಅಕಾಡೆಮಿ ಸದಸ್ಯ ಪಡಿಞರಂಡ ಪ್ರಭುಕುಮಾರ್, ತಾಂತ್ರಿಕ ಸಲಹೆಗಾರ ಕೋಟ್ರಮಾಡ ಮಾದಪ್ಪ ಇದ್ದರು.