ವೀರಾಜಪೇಟೆ ಆ. 25: ವೀರಾಜಪೇಟೆಯ ಅಪ್ಪಯ್ಯಸ್ವಾಮಿ ರಸ್ತೆಯ ಮನೆ ಬಳಿಯ ಖಾಲಿ ಜಾಗದಲ್ಲಿ ಪ್ರಾಯೋಗಿಕವಾಗಿ ಜಾತಿ ಬಿದಿರು ಮುಂಡದಲ್ಲಿ ಬೆಳೆದಿದ್ದ ಅರಣ್ಯ ಉತ್ಪನ್ನವಾದ ಕಣಿಲೆಯನ್ನು ಕಳವು ಮಾಡಿದ ಆರೋಪಕ್ಕಾಗಿ ಇಲ್ಲಿನ ನಗರ ಪೊಲೀಸರು ಶಿವಕೇರಿಯ ಪುಟ್ಟುಸ್ವಾಮಿ ಅವರ ಪತ್ನಿ ಸೀತಮ್ಮ ಹಾಗೂ ಪುತ್ರಿ ಅಭಿಲಾಷಿಣಿ ಎಂಬಿಬ್ಬರನ್ನು ಬಂಧಿಸಿ ಇಲ್ಲಿನ ಪ್ರಿನ್ಸಿಪಲ್ ಮುನ್ಸಿಫ್ ನ್ಯಾಯಾಲಯದ ಮುಂದೆ ಹಾಜರುಪಡಿಸಿದ ಮೇರೆ ಇಬ್ಬರನ್ನು ಹದಿನೈದು ದಿನಗಳ ತನಕ ನ್ಯಾಯಾಂಗ ಬಂಧನದಲ್ಲಿಡುವಂತೆ ನ್ಯಾಯಾಧೀಶರು ಆದೇಶಿಸಿದ್ದಾರೆ.ಮೂರು ದಿನಗಳ ಹಿಂದೆ ಇಲ್ಲಿನ ಅಪ್ಪಯ್ಯಸ್ವಾಮಿ ರಸ್ತೆಯಲ್ಲಿರುವ ನಿತೀನ್ ಎಂಬವರ ಮನೆಯ ಖಾಲಿ ಜಾಗದಲ್ಲಿ ಬೆಳೆದಿದ್ದ ರೂ. 20,000 ಮೌಲ್ಯದ ಬಿದಿರು ಕಣಿಲೆಯನ್ನು ಕಳವು ಮಾಡಿ ಮಾರಾಟಕ್ಕೆ ಯತ್ನಿಸಿದ್ದರೆಂದು ನಿತಿನ್ ಇಲ್ಲಿನ ನಗರ ಪೊಲೀಸರಿಗೆ ದೂರು ನೀಡಿದ್ದರು.